ಶಿವಕಾಶಿ: ಪಟಾಕಿ ಅಂಗಡಿಯಲ್ಲಿ ಅಗ್ನಿ ದುರಂತ : ಮಹಿಳೆಯರು ಸೇರಿ 13 ಸಾವು.

Coastal Bulletin
ಶಿವಕಾಶಿ: ಪಟಾಕಿ ಅಂಗಡಿಯಲ್ಲಿ ಅಗ್ನಿ ದುರಂತ : ಮಹಿಳೆಯರು ಸೇರಿ 13 ಸಾವು.

ತಮಿಳುನಾಡು :ದೀಪಾವಳಿ ಹಬ್ಬ ಹತ್ತಿರ ಬರುತ್ತಿದ್ದಂತೆ ಪಟಾಕಿ ತಯಾರಿಕ ಘಟಕಗಳು ಬಿರುಸಿನ ಉತ್ಪಾದನೆಗೆ ತಯಾರಾಗುತ್ತವೆ ಆದರೆ ಸೂಕ್ತ ಮುಂಜಾಗ್ರತ ಕ್ರಮ ಕೈಗೊಳ್ಳದೆ ಕೆಲವು ಅವಘಡಗಳು ಸಂಭವಿಸುತ್ತವೆ, ತಮಿಳುನಾಡಿನ ಪ್ರಸಿದ್ಧ ಪಟಾಕಿ ತಯಾರಿಕಾ ಪಟ್ಟಣ 'ಶಿವಕಾಶಿ'ಯಲ್ಲಿ ಮಂಗಳವಾರ ಸಂಭವಿಸಿದ ಎರಡು ಪ್ರತ್ಯೇಕ ಅಗ್ನಿ ಅವಘಡದಲ್ಲಿ 6 ಮಹಿಳೆಯರು ಸೇರಿ 13 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.

ಶಿವಕಾಶಿಯ ಎಂ.ಪುದುಪಟ್ಟ ಪಟಾಕಿ ಅಂಗಡಿಯಲ್ಲಿ ಮಂಗಳವಾರ ಮಧ್ಯಾಹ್ನ ಪಟಾಕಿಗಳನ್ನು ಪರಿಶೀಲಿಸುವಾಗ ಅಗ್ನಿ ದುರಂತ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಸಮೀಪದ ಮತ್ತೊಂದು ಅಂಗಡಿಗೂ ಬೆಂಕಿ ತಾಗಿ, ಜ್ವಾಲೆ ವ್ಯಾಪಿಸಿದೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಸ್ಥಳಕ್ಕೆ ಭೇಟಿ ನೀಡಿದ ವಿರುಧುನಗರ ಎಸ್‌ಪಿ ಶ್ರೀನಿವಾಸ್ ಪೆರುಮಾಳ್, ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಮತ್ತೊಂದೆಡೆ ಕಿಚನಾಯಕನ್‌ ಪಟ್ಟಿಯ

ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 60 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದಾರೆ. ಪಟಾಕಿ ತಯರಿಯಲು ರಾಸಾಯನಿಕ ಅಂಶಗಳನ್ನು ಮಿಶ್ರಣ ಮಾಡುವ ವೇಳೆ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಗ್ನಿ ಅವಘ ಡಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಸಂತ್ರಸ್ತರಿಗೆ ತಲಾ 3 ಲಕ್ಷರೂ. ಗಾಯಾಳುಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರ ಪ್ರಕಟಿಸಿದ್ದಾರೆ.

Leave a Comment