ಬಂಟ್ವಾಳ :ವಿಶ್ವ ಹಿಂದೂ ಪರಿಷದ್ ಬಜರಂಗದಳದಿಂದ ಸೇವಾ ಕಾರ್ಯ.

Coastal Bulletin
ಬಂಟ್ವಾಳ :ವಿಶ್ವ ಹಿಂದೂ ಪರಿಷದ್ ಬಜರಂಗದಳದಿಂದ ಸೇವಾ ಕಾರ್ಯ.

ಬಂಟ್ವಾಳ: ಕುರಿಯಾಳದ ಪದ್ಮನಾಭ ಪೂಜಾರಿ ಅವರ ತೀರಾ ಅಸಹಾಯಕ ಮತ್ತು ಬಡತನದಲ್ಲಿದ್ದ ಕುಟುಂಬಕ್ಕೆ ವಿಶ್ವಹಿಂದು ಪರಿಷತ್ ಬಜರಂಗದಳ ಬಂಟ್ಟಾಳ ಪ್ರಖಂಡದ ವತಿಯಿಂದ ಧರ್ಮ ರಕ್ಷಣೆ ಮತ್ತು ಸೇವಾ ಕಾರ್ಯ ನಡೆಯಿತು.

ಕುರಿಯಾಳದಲ್ಲಿ ಹಿಂದು ಕುಟುಂಬವೊಂದು ತೀರಾ ಸಂಕಷ್ಟದಲ್ಲಿದ್ದು ಮನೆ ಮತ್ತು ಮನೆಯ ಪರಿಸರ ಕೆಟ್ಟು ಹೋಗಿದ್ದು ಮನೆಯನ್ನು ಸಂಪೂರ್ಣವಾಗಿ ಶುಚಿಗೊಳಿಸಿ ಮನೆಗೆ ಸಂಪೂರ್ಣವಾಗಿ ಬಣ್ಣ ಬಳಿಯುವ ಕಾರ್ಯವನ್ನು ಬಂಟ್ಟಾಳ ಬಜರಂಗದಳ ಕಾರ್ಯಕರ್ತರು

ಮಾಡಿದರು ಹಾಗೆಯೇ‌ ಮನೆಗೆ ಒಂದು ತಿಂಗಳಿಗೆ ಬೇಕಾದ ದಿನಸಿ ಸಾಮಾಗ್ರಿಗಳನ್ನು ಒದಗಿಸಿ ಮುಂದೆ ಎಲ್ಲಾ ರೀತಿಯ ಮೂಲ ಸೌಕರ್ಯವನ್ನು ಒದಗಿಸುವ ಜವಾಬ್ದಾರಿಯನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ವು ವಹಿಸಿಕೊಂಡಿದೆ.

Leave a Comment