ಬಂಟ್ವಾಳ:ಎ.20ರಂದು ಶನಿವಾರ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ ವೈ ವಿಜಯೇಂದ್ರರವರು ಬಂಟ್ವಾಳದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಸರಿಯಾಗಿ ಬಿ.ಸಿ.ರೋಡ್ ಗಾಣದಪಡ್ಡು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಬೃಹತ್ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಹೇಳಿದರು.
ಅವರು ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 'ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದ.ಕ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಕ್ಯಾ ಬ್ರಿಜೇಶ್ ಚೌಟ ರವರು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ 5 ಸಲ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. . . ಎ.21 ಭಾನುವಾರ ಇಡೀ ಕ್ಷೇತ್ರದಲ್ಲಿ ಮಹಾಭಿಯಾನ ಕಾರ್ಯದಲ್ಲಿ ಕ್ಷೇತ್ರದ ಶಾಸಕರು ಸಮೇತ ಮಾಜಿ ಶಾಸಕರು, ಜನಪ್ರತಿನಿಧಿಗಳು ಪಕ್ಷ ಎಲ್ಲಾ ಪ್ರಮುಖರು ಅವರವರ ಬೂತ್ ನಲ್ಲಿದ್ದು, ಮನೆಸಂಪರ್ಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಕ್ಷೇತ್ರ ಶಾಸಕರಾದ ರಾಜೇಶ್ ನಾಯ್ಕ ರವರು ಪ್ರತೀ ಗ್ರಾಮ ಮಟ್ಟದಲ್ಲಿ ಮನೆಮನ ಸಂಪರ್ಕದಲ್ಲಿ ಈಗಾಗಲೇ ತೊಡಗಿಸಿಕೊಂಡಿದ್ದಾರೆ. 59 ಗ್ರಾಮದಲ್ಲಿ ಪ್ರಮುಖರ ಸಭೆ, ಬೂತ್ ನಲ್ಲಿ 4,5 ಕಡೆಗಳಲ್ಲಿ ಚಾವಡಿ ಸಭೆಗಳನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಮತದಾರರನ್ನು ಸೇರಿಸಿ ಪರಿವಾರ ಮತ್ತು ಬಿಜೆಪಿ ಪ್ರಮುಖರು ಸೇರಿಸಿ ಸಭೆಗಳನ್ನು ನಡೆಸುತ್ತಾ ಇದ್ದಾರೆ. 8 ಮಹಾಶಕ್ತಿ ಕೇಂದ್ರಗಳಲ್ಲಿ ಸಾರ್ವಜನಿಕ ಸಭೆ ರೋಡ್ ಶೋ ಮುಂತಾದ ಕಾರ್ಯಕ್ರಮಗಳು ಜರಗಲಿದೆ ಎಂದು ಹೇಳಿದರು
ಎ.22ರಂದು ಸೋಮವಾರ ಅಭ್ಯರ್ಥಿ ಬ್ರಿಜೇಶ್ ಚೌಟರವರ ಪ್ರವಾಸ ಬಂಟ್ವಾಳದಲ್ಲಿ ನಡೆಯಲಿದೆ. ಬೆಳಿಗ್ಗೆ 9.00 ಗಂಟೆಗೆ ಕುಲಾಲ ಸಮುದಾಯ ಪ್ರಮುಖರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. 10.00 ಗಂಟೆಗೆ ವಿಶ್ವಕರ್ಮ ಸಮುದಾಯ ಪ್ರಮುಖರ ಜೊತೆ ಸಮಾಲೋಚನೆ 11.30 ರಿಂದ ಮಧ್ಯಾಹ್ನ 1.00 ಗಂಟೆ ತನಕ ಬಿ.ಸಿ.ರೋಡ್ ಕೈಕಂಬದಿಂದ ರಿಕ್ಷಾ ಪಾರ್ಕ್ ಗಳಲ್ಲಿ ಮತ್ತು ನಗರದಲ್ಲಿ ಮತಯಾಚನೆ ಮಾಡಲಿದ್ದಾರೆ.ಮಧ್ಯಾಹ್ನ 2.30ಕ್ಕೆ ಪ್ರಬುದ್ಧರ ಜೊತೆ ಸಂವಾದ ನಡೆಸಲಿದ್ದಾರೆ.ಸಂಜೆ 4 ಗಂಟೆಯಿಂದ 5 ರವರೆಗೆ ವಿಟ್ಲಪಡೂರು ಬಲಿಪಗುರಿ ಹಾಳೆ ತಟ್ಟೆ ಫ್ಯಾಕ್ಟರಿಗೆ ಭೇಟಿ ಮತಯಾಚನೆ ನಡೆಸಲಿದ್ದಾರೆ. ಸಂಜೆ 5 ಗಂಟೆಗೆ ವಿಟ್ಲಪಡೂರು ಶಕ್ತಿಕೇಂದ್ರ ಸಾರ್ವಜನಿಕ ಸಭೆ ಆನಂತಾಡಿ ಗೋಳಿಕಟ್ಟೆ ಯಲ್ಲಿ ಜರಗಲಿದೆ. 6.30ಕ್ಕೆ ಕೊಳ್ಳಾಡು ಮಹಾಶಕ್ತಿಕೇಂದ್ರ
ಸಾರ್ವಜನಿಕ ಸಭೆ ಸಾಲೆತ್ತೂರು ಜಂಕ್ಷನ್ ನಲ್ಲಿ ಬಾಳ್ತಿಲ ನರಿಕೊಂಬು ಮಹಾಶಕ್ತಿಕೇಂದ್ರದ ಸಭೆ ಕಲ್ಲಡ್ಕ ಜಂಕ್ಷನ್ ನಲ್ಲಿ ರಾತ್ರಿ 7.30ಕ್ಕೆ ಜರಗಲಿದೆ ಎಂದು ಹೇಳಿದರು.
ಈ ಚುನಾವಣೆ ದೇಶದ ಚುನಾವಣೆ ಹಾಗಾಗಿ ಜಾತಿ ಹೆಸರಲ್ಲಿ ಚುನಾವಣೆ ನಡೆಯುವುದಿಲ್ಲ. ಕೆಲವರು ಜಾತಿ ಹೆಸರಿನಲ್ಲಿ ಗುಪ್ತವಾಗಿ ಮತಯಾಚನೆ ಮಾಡುತ್ತಾ ಇದ್ದಾರೆ. ದೇಶದ 140 ಕೋಟಿ ಜನರು ಈ ದೇಶದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವ ಅಪೇಕ್ಷೆಯನ್ನು ಹೊಂದಿದ್ದಾರೆ. ದೇಶ ಉಳಿದರೆ ಧರ್ಮ ಉಳಿಯುತ್ತೆ, ಧರ್ಮ ಉಳಿದರೆ ಜಾತಿ ಉಳಿಯುತ್ತೆ . ಹಾಗಾಗಿ ಎಲ್ಲರೂ ಜಾತಿ ಮತ ಬಿಟ್ಟು ದೇಶದ ಬಗ್ಗೆ ಯೋಚನೆ ಮಾಡಿ ಮತದಾನ ಮಾಡಬೇಕು. ಕಳೆದ 10 ವರ್ಷದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದ ಸಾಧನೆಗಳನ್ನು ಹಾಗೂ ಕರ್ನಾಟಕದಲ್ಲಿ ಬಿ ಎಸ್ ಯಡಿಯೂರಪ್ಪನವರ ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸಿ ಮತಯಾಚನೆ ಮಾಡುತ್ತಾ ಇದ್ದೇವೆ ಎಂದು ಮಾಜಿ ಸಚಿವ ಬಿ ನಾಗರಾಜ ಶೆಟ್ಟಿ ಹೇಳಿದರು.
ಕಳೆದ 5 ವರ್ಷಗಳಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕ್ಷೇತ್ರ ಶಾಸಕರಾದ ರಾಜೇಶ್ ನಾಯ್ ರವರು ಮಾಡಿದ ಅಭಿವ್ಯ ಕೆಲಸಕಾರ್ಯಗಳು ನಮ್ಮ ಅಭಿವೃದ್ಧಿಗೆ ಪೂರಕವಾಗಲಿದೆ. ಈ ಚುನಾವಣೆ ಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡ ಮಟ್ಟ ಅಂತರದಿಂದ ಬಿಜೆಪಿ ಅಭ್ಯರ್ಥಿ ಕ್ಯಾ, ಬ್ರಿಜೇಶ್ ಚೌಟರು ಮುನ್ನಡೆ ಪಡೆಯಲಿದ್ದಾರೆ ದ .ಕ.ಜಿಲ್ಲೆಯ ಜನರಿಗೆ ಜಾತಿ ಮುಖ್ಯವಲ್ಲ ದೇಶ ಮುಖ್ಯವಾಗಿದ್ದು, ಅಪಪ್ರಚಾರಗಳಿಗೆ ಕಿವಿಗೊಡದಂತೆ ಮಾಜಿ ಶಾಸಕ ಕೆ ಪದ್ಮನಾಭ ಕೊಟ್ಟಾರಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ, ಹಿಂದುಳಿದ ವರ್ಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ, ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವಾಮದಪದವು, ಉಪಾಧ್ಯಕ್ಷ ಚಿದಾನಂದ ರೈ ಕಕ್ಯ ಮತ್ತಿತರರು ಉಪಸ್ಥಿತರಿದ್ದರು.









