ಹೊೖಗೆಬಜಾರ್: ಫ್ರೆಂಡ್ಸ್ ಕ್ರಿಕೆಟರ್ಸ್ ಇದರ 23ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ.

Coastal Bulletin
ಹೊೖಗೆಬಜಾರ್: ಫ್ರೆಂಡ್ಸ್ ಕ್ರಿಕೆಟರ್ಸ್ ಇದರ 23ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ.

ಮಂಗಳೂರು : ಹೊೖಗೆಬಜಾರ್ ಫ್ರೆಂಡ್ಸ್ ಕ್ರಿಕೆಟರ್ಸ್ (ರಿ.) ಪಠೇಲ್ ಕಂಪೌಂಡ್ ಹೊೖಗೆಬಜಾರ್ ಇದರ 23ನೇ ವರ್ಷದ ವಾರ್ಷಿಕೋತ್ಸವವು ಮಾ.16 ರಂದು ಶನಿವಾರ ಎಚ್.ಎಫ್.ಸಿ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಿತು.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ಶಾಸಕ ಡಿ. ವೇದವ್ಯಾಸ್ ಕಾಮತ್ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಸಭಾ ಕಾರ್ಯಕ್ರಮದಲ್ಲಿ ಉಮೇಶ್ ಶೆಟ್ಟಿ ಮಾತನಾಡಿ ಎಚ್.ಎಫ್.ಸಿ (ರಿ.) ತಂಡ ಒಳ್ಳೆಯ ಕೆಲಸಗಳನ್ನು ಮಾಡಿದ್ದು ಜನರ ಕಷ್ಟಗಳಿಗೆ ಸ್ಪಂದಿಸಿದ ರೀತಿಯನ್ನು ಶ್ಲಾಘಿಸಿದರು, ಮುಖ್ಯ ಅತಿಥಿಗಳಾಗಿ ರಾಜೇಶ್ ಪೂನಿಯಾ,ಉಮೇಶ್ ಕೋಟ್ಯಾನ್, ಶೇಖರ್ ಸಾಲಿಯನ್,ವಿನೋದ್ ಫಿಶ್ ನೆಟ್, ರಾಜೇಶ್ ಶೆಟ್ಟಿ, ಶ್ರೀನಿವಾಸ್, ಸುಕೇತ್ ರಾಜ್, ಸಂಪತ್ ಕುಮಾರ್, ಅನ್ನು ಕಾಂಚನ,ಮೋಹಿನಿ, ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು ಬಿ. ಪುರುಷೋತ್ತಮ ಗುಜರನ್ ಶಿವಾಜಿ ಫಿಸಿಕಲ್ ಕಲ್ಬರಲ್ ಇನ್ ಸ್ಟಿಟ್ಯೂಟ್ ಬೋಳಾರ ಇದರ

ಗುರುಗಳು, ಡಾ.ಪ್ರಖ್ಯಾತ್ ರೈ ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯದಲ್ಲಿ ಡಾಕ್ಟರೇಟ್ ಪದವಿ, ಸಂದೇಶ್ ತಿಂಗಳಾಯ ಈಜು ಪಟು, ಯಶವಂತ್ ನಾಯಕ್ ತಂಡದ ಅಧ್ಯಕ್ಷರು ಹಾಗೂ ಸಮಾಜ ಸೇವ ಕಾರ್ಯಕರ್ತರು, ಕಲಾ ತೇಜಸ್ವಿ ಜೆ. ಪಿ. ತೂಮಿನಾಡು ನಾಟಕ ನಿರ್ದೇಶಕರು ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪ್ರಸಕ್ತ 2023-24ನೇ ಸಾಲಿನ 30ಗಜಗಳ ಆಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಅಂಕಪಟ್ಟಿಯ ಅಗ್ರ 5 ತಂಡಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು, ರೋಹಿತ್ ಉಳ್ಳಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾರದಾ ಆಟ್ಸ್ ಕಲಾವಿದರು (ರಿ.) ಮಂಜೇಶ್ವರ ಅಭಿನಯಿಸುವ ಈ ವರ್ಷದ ಸೂಪರ್ ಹಿಟ್ ನಾಟಕ ''ಕಥೆ ಎಡ್ಡೆಂಡು'' ತುಳು ಹಾಸ್ಯಮಯ ನಾಟಕ ಪ್ರದರ್ಶಿಸಲಾಯಿತು

Leave a Comment