ಬಂಟ್ವಾಳ : ಪುದು ಗ್ರಾಮ ಪಂಚಾಯತ್ ನಲ್ಲಿ ಫೆ. 25 ರಂದು ನಡೆಯಲಿರುವ ಗ್ರಾ.ಪಂ.ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ, ಹಾಗೂ ಚುನಾವಣೆ ಯ ನೀತಿ ನಿಯಮಗಳ ಬಗ್ಗೆ ಫರಂಗಿಪೇಟೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸರು ವಿಶೇಷ ಸಭೆ ನಡೆಸಿದರು.
ಚುನಾವಣೆ ನಡೆಯುವ ಗ್ರಾ.ಪಂ.ನ ಪ್ರತಿ ವಾರ್ಡ್ ಗಳಲ್ಲಿ ಯಾವುದೇ ಗೊಂದಲಗಳಿಗೆ ಕಾರಣವಾಗಬಾರದು ಎಂಬ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಮುಖಂಡರು, ರಾಜಕೀಯ ಪ್ರಮುಖರು , ಸಾಮಾಜಿಕ ಕಾರ್ಯಕರ್ತರನ್ನು ಸೇರಿಸಿ ಸಭೆ ನಡೆಸಲಾಗಿದೆ.
ಚುನಾವಣೆ ನಡೆದು ಮತ ಏಣಿಕೆ ಕಾರ್ಯ ಮುಗಿಯುವವರೆಗೆ
ಈ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಸುಳ್ಳು ಸುದ್ದಿ ಹರಡದಂತೆ ಸೂಕ್ತ ಸಲಹೆಗಳನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಸಂತೋಷ್ ಶೆಟ್ಟಿ ನೀಡಿದರು. ಗ್ರಾಮಾಂತರ ಠಾಣಾ ಎಸ್.ಐ.ಉದಯರವಿ ಕೆಲವೊಂದು ಮಾಹಿತಿಗಳನ್ನು ನೀಡಿದರು.














