ಮಂಗಳೂರು: ವಲಯ xv ರ ಪ್ರತಿಷ್ಠಿತ ಘಟಕ ಜೆಸಿಐ ಮಂಗಳೂರು ಸಾಮ್ರಾಟ್ ಅಧ್ಯಕ್ಷರಾಗಿ ಜೆಸಿ ಅನುಶ್ಚಂದ್ರ ಹಾಗೂ ಕಾರ್ಯದರ್ಶಿಯಾಗಿ ಜೆಸಿ ವಿಜೇಶ್ ಶೆಟ್ಟಿ ಇವರನ್ನು ಘಟಕದ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಜೆಸಿ ಅನುಶ್ಚಂದ್ರ ಇವರು ಸುಮಾರು 8 ವರ್ಷಗಳಿಂದ ಜೇಸೀ ಆಂದೋಲನದಲ್ಲಿ ಸಕ್ರಿಯ ಸದಸ್ಯರಾಗಿ ಹಲವಾರು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು, ಘಟಕದ ಕಾರ್ಯದರ್ಶಿಯಾಗಿ ತನ್ನ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ವಿಶೇಷ ಪರಿಣತಿಯನ್ನು ಹೊಂದಿರುವ ಇವರು ವಿಡಿಯೋ ಪ್ರೊಡಕ್ಷನ್ ನಲ್ಲಿ 12 ವರ್ಷಗಳ ಅನುಭವವನ್ನು ಹೊಂದಿದ್ದಾರೆ.
ಅತ್ಯುತ್ತಮ ಸಂವಹನ ಕಲೆ ಹೊಂದಿರುವ ಇವರು BNI ಆದಿ, ಮಂಗಳೂರು ಇದರ ಸದಸ್ಯರು.
ಜೆಸಿ ವಿಜೇಶ್ ಶೆಟ್ಟಿ ಮಂಗಳೂರು MSEZ ಉದ್ಯೋಗಿಯಾಗಿದ್ದು, ಜೇಸೀ ಆಂದೋಲನದಲ್ಲಿ ಸುಮಾರು ಎಂಟು ವರ್ಷಗಳ ಅನುಭವ ಹೊಂದಿದ್ದಾರೆ. ಘಟಕದ ಸಕ್ರಿಯ ಸದಸ್ಯರಾಗಿ ಹಲವಾರು ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ, ಪ್ರಸ್ತುತ ಘಟಕದ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.














