Coastal Bulletin

ಬಂಟ್ವಾಳ : ವಕೀಲರ ರಕ್ಷಣಾ ಕಾಯ್ದೆ ಮಸೂದೆಯನ್ನು ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆ ಮಾಡಿ ಅಂಗೀಕರಿಸುವಂತೆ ಒತ್ತಾಯಿಸಿ ಬಂಟ್ವಾಳ ತಾಲ್ಲೂಕು ಘಟಕದ ವತಿಯಿಂದ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಇಂದು ವಕೀಲರಿಗೆ ರಕ್ಷಣೆ ಇಲ್ಲದಂತಾಗಿದ್ದು ಹಲವಾರು ಸಂದರ್ಭಗಳಲ್ಲಿ ವಕೀಲರ ಮೇಲೆ ದಾಳಿಗಳಾಗುತ್ತಿರುವ ಪ್ರಕರಣಗಳು ಆಗುತ್ತಲೇ ಇದೆ. ಹಾಗಾಗಿ‌, ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಬೇಕೆಂದು ವಕೀಲರ ಆಗ್ರಹವಾಗಿದೆ.

ಮನವಿ ಸಲ್ಲಿಸಿದ ನಿಯೋಗದಲ್ಲಿ ಜಿಲ್ಲಾ ಕಾನೂನು ವೇದಿಕೆಯ ತಾಲೂಕು ಅಧ್ಯಕ್ಷ ಸುರೇಶ್ ಪೂಜಾರಿ,

ಹಿರಿಯ ವಕೀಲ ಚಂದ್ರಶೇಖರ ಕೆ.ವಿ, ಹಾತಿಮ್ ಅಹಮದ್, ಚಂದ್ರಶೇಖರ ರಾವ್ ಪುಂಚಮೆ, ಸುರೇಶ್ ಕುಮಾರ್ ನಾವೂರು , ಗಂಗಾಧರ ನಾಯಕ್ , ಯುವ ವಕೀಲರಾದ ವೀರೇಂದ್ರ ಸಿದ್ಧಕಟ್ಟೆ, ಮೋಹನ್ ಕುಮಾರ್ ಕಡೇಶ್ವಾಲ್ಯ, ತುಳಸೀದಾಸ್ ವಿಟ್ಲ, ಸಾಯಿನಾಥ್ ಗೌಡ ಮುಂತಾದವರು ಉಪಸ್ಥಿತರಿದ್ದರು.

Leave a Comment