ಕೋಟೆಕಾರು ಪಟ್ಟಣ ಪಂಚಾಯಿತಿ ಮತ್ತು ಸೋಮೇಶ್ವರ ಪುರಸಭಾ ವ್ಯಾಪ್ತಿಯ ಮಾಡ್ಯಾರ್ 1 ನೇ ರಸ್ತೆಯ ಸುಮಾರು 6.5 ಲಕ್ಷ ರೂಪಾಯಿ ಅನುದಾನದಿಂದ ಕಾಂಕ್ರೀಟ್ ರಸ್ತೆಯನ್ನು ನ.16ರಂದು ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರು ಶ್ರೀ ಸತೀಶ್ ಕುಂಪಲ ರವರು ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭ ಬಿಜೆಪಿ ಉಳ್ಳಾಲ ಮಂಡಲ ಅಧ್ಯಕ್ಷರು ಶ್ರೀ ಜಗದೀಶ್ ಆಳ್ವ ಕುವೆತಬೈಲ್, ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ದಿವ್ಯಾ ಸತೀಶ್ ಶೆಟ್ಟಿ, ಸೋಮೇಶ್ವರ ಪುರಸಭಾ ಅಧೆಕ್ಷೆ ಶ್ರೀಮತಿ ಕಮಲ, ಉಪಾಧ್ಯಕ್ಷರು ರವಿಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ, ಕೋಟೆಕಾರು
ಪಟ್ಟಣ ಪಂಚಾಯತ್ ಸದಸ್ಯ ಶ್ರೀ ಕಿರಣ್ ಕುಮಾರ್, ಉಳ್ಳಾಲ ಮಂಡಲದ ದಯಾನಂದ್ ತೊಕ್ಕೊಟ್ಟು , ದೀಕ್ಷಿತ್ ಕುಂಪಲ, ಪದ್ಮನಾಭ ಗಟ್ಟಿ, ಪ್ರವೀಣ್ ಶೆಟ್ಟಿ , ಲೋಹಿತ್ ಶೆಟ್ಟಿ,ಯಾದವ ಗಟ್ಟಿ, ರಾಜೇಶ್ ಶೆಟ್ಟಿ, ಪುನೀತ್ ಮಾಡ್ಯಾರ್, ಕೌಶಿಕ್, ಜಯರಾಂ, ಶೇಖರ್, ಗಣೇಶ್, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.












