Coastal Bulletin

ಬಂಟ್ವಾಳ :ಸ್ವಸ್ತಿಕ್ ನ್ಯಾಷನಲ್ ಸ್ಕೂಲ್ ಉರ್ವ ಸ್ಟೋರ್, ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ "ಸ್ವಸ್ತಿಕ ಹಳ್ಳಿ ಹಬ್ಬ"ವು ಮೇ 17 ರಿಂದ 23ರ ವರೆಗೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಹೊಳ್ಳರಬೈಲಿನಲ್ಲಿ ನಡೆಯಲಿದೆ.

ಮೇ 17 ರಂದು ಸಂಜೆ 6ಕ್ಕೆ ಬಂಟ್ವಾಳ ಶಾಸಕ ರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಉಪಸ್ಥಿತಿಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ. ಕುಮಾರ್ ಅವರು ಶಿಬಿರಾನು ಉದ್ಘಾಟಿಸಲಿದ್ದಾರೆ.

 ಮೇ 23ರಂದು ಸಂಜೆ 7ಕ್ಕೆ ಶಾಸಕ ಡಿ

ವೇದವ್ಯಾಸ ಕಾಮತ್ ಸಮರೋಪ ಸಮಾರಂಭದ ಭಾಷಣ ಮಾಡಲಿದ್ದಾರೆ, ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಡಾ. ಸಿದ್ದೇಗೌಡ ಅವರು ಸೇವಾರತ್ನ ಪುರಸ್ಕಾರ ಪಡೆಯಲಿದ್ದಾರೆ ಎಂದು ಸ್ವಸ್ತಿಕ ಸಂಸ್ಥೆಯ ಅಧ್ಯಕ್ಷ ಡಾ. ರಾಘವೇಂದ್ರ ಹೊಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment