Coastal Bulletin

ಕುಲಶೇಖರ: ಕುಲಾಲ ಸಮುದಾಯದ ಕುಲದೇವರಾಗಿದ್ದರೂ ಇಡೀ ಕರಾವಳಿಯ ಸ್ವಾಭಿಮಾನದ ಸಂಕೇತವಾಗಿ ವೀರನಾರಾಯಣ ದೇಗುಲ ಬೆಳೆದುನಿಂತಿದೆ. ಒಂದು ಧಾರ್ಮಿಕ ಕೇಂದ್ರದ ಅಭಿವೃದ್ಧಿಯಿಂದ ಸುತ್ತಲಿನ ಪ್ರದೇಶ ಮಾತ್ರವಲ್ಲದೆ ಇಡೀ ಸಮಾಜ ಅಭ್ಯುದಯವಾಗುತ್ತದೆ. ಕುಲಶೇಖರ ಕ್ಷೇತ್ರ ಸಮಾಜವನ್ನು ಜೋಡಿಸುವ ಮತ್ತು ಸಂಸ್ಕಾರ, ಆಚಾರ-ವಿಚಾರವನ್ನು ಮುಂದಿನ ಪೀಳಿಗೆಗೆ ದಾಟಿಸುವ ಬಹುದೊಡ್ಡ ಕೇಂದ್ರವಾಗಿ ಮೆರೆಯಲಿ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಹೇಳಿದರು.

ಅವರು ಮೇ ೧೪ರಿಂದ ಮೊದಲ್ಗೊಂಡು ೨೫ರವರೆಗೆ ಜರಗುತ್ತಿರುವ ಇತಿಹಾಸ ಪ್ರಸಿದ್ಧ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಂಗಳವಾರ ಸಂಜೆ ಜರಗಿದ ಧಾರ್ಮಿಕಸಭೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ದೇಗುಲದ ಪುನರ್ ನಿರ್ಮಾಣಕ್ಕೆ ಸರಕಾರದಿಂದ ಗರಿಷ್ಠ ಪ್ರಮಾಣದ ಅನುದಾನ ನೀಡುವಲ್ಲಿ ಶ್ರಮಿಸುತ್ತೇನೆ ಎಂದರು.

ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತಿಯಿದ್ದರು. ಮಂಗಳೂರು ವಿ.ವಿ.ಯ ಪ್ರಾಧ್ಯಾಪಕ ದೇರೇಬೈಲು ಡಾ. ಶಿವಪ್ರಸಾದ್ ತಂತ್ರಿ ಮಾತನಾಡಿ, ಪಾಲುಬಿದ್ದ ದೇಗುಲದ ಅಭಿವೃದ್ಧಿ ನೂತನ ದೇಗುಲದ ನಿರ್ಮಾಣಕ್ಕಿಂತ ನೂರು ಪಟ್ಟು ಪುಣ್ಯ ಜಾಸ್ತಿ. ಇಂತಹ ಭಾಗ್ಯ ಒದಗಿಬಂದಿರುವುದಕ್ಕೆ ನೀವೆಲ್ಲರೂ ಪುಣ್ಯವಂತರು ಎಂದರು.

ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ವಿಠಲ್ ಕನೀರ್‌ತೋಟ ಅಧ್ಯಕ್ಷತೆ ವಹಿಸಿದ್ದರು. ಕುಲಶೇಖರ ಚರ್ಚ್‌ನ ಧರ್ಮಗುರು ಫಾ. ಕ್ಲಿಪರ್ಡ್ ಫೆರ್ನಾಂಡೀಸ್, ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ, ರಾಜ್ಯ ಕುಂಬಾರರ ಮಹಾಸಂಘದ ಕಾರ್ಯಾಧ್ಯಕ್ಷ ಡಾ|| ಎಂ. ಅಣ್ಣಯ್ಯ ಕುಲಾಲ್ ಉಳ್ತೂರು, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ಗೋಪಾಲಕೃಷ್ಣ ಕುಲಾಲ್ ವಾಂತಿಜಾಲ್, ಉದ್ಯಮಿ ಬಾಬ ಅಲಂಕಾರ್, ಪ್ರೊಫೆಸರ್ ಡಾ| ಯತೀಶ್ ಕುಮಾರ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ಭಂಡಾರಿ ಹೊಸಬೆಟ್ಟು, ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ವಿಶ್ವನಾಥ, ಹಿಂದೂ ಯುವಸೇನೆಯ ಯಶೋಧರ ಚೌಟ, ಕೊಲ್ಯ ಕುಲಾಲ ಸಂಘದ ಅಧ್ಯಕ್ಷ ಭಾಸ್ಕರ ಕುತ್ತಾರು, ಪುಡಿಪು ಕುಲಾಲ ಸಂಘದ ಅಧ್ಯಕ್ಷ ಪುಂಡಾರೀಕಾಕ್ಷ, ತೋಕೂರು ಕುಲಾಲ ಸಂಘದ ಅಧ್ಯಕ್ಷ ಶ್ರೀಧರ ಬಂಗೇರ, ಇರಾ ಕುಲಾಲ ಸಂಘದ ಅಧ್ಯಕ್ಷ ಪುರುಷೋತ್ತಮ್, ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಉಪಾಧ್ಯಕ್ಷ ಡಾ. ಜಯರಾಜ್ ಪ್ರಕಾಶ್, ಸಂಘಟನಾ ಕಾರ್ಯದರ್ಶಿ

ದಾಸ್ ಪ್ರಮೋಸನ್ಸ್‌ನ ಲ| ಅನಿದಾಸ್, ಉದ್ಯಮಿ ಗಣೇಶ್ ಕುಲಾಲ್, ಕೃಷ್ಣ ಕುಲಾಲ್ ಕೋಡಿಕಲ್ ವಿಶ್ವನಾಥ ಟಿ. ವಾಮಂಜೂರು, ದೇಗುಲದ ವಿವಿಧ ಸಮಿತಿ ಪದಾಧಿಕಾರಿಗಳಾದ ಪುರುಷೋತ್ತಮ ಕುಲಾಲ್, ಬಿ. ಪ್ರೇಮಾನಂದ ಕುಲಾಲ್, ಕೆ. ಸುಂದರ ಕುಲಾಲ್, ದಾಮೋದರ ಎ. ಬಂಗೇರ, ಎಂ.ಪಿ. ಬಂಗೇರ ಬಿಜೈ, ಗೀತಾ ಮನೋಜ್, ಗಿರಿಧರ ಜೆ. ಮೂಲ್ಯ, ಬಿ. ಮೋಹನದಾಸ್ ಅಳಪೆ, ರಘು ಎ. ಮೂಲ್ಯ ಮುಂಬೈ, ಸುನಿಲ್ ಆರ್. ಸಾಲ್ಯಾನ್ ಮುಂಬೈ, ದಿವಾಕರ ಮೂಲ್ಯ ಬೆಂಗಳೂರು ಮತ್ತಿತರರು ಉಪಸ್ಥಿತರಿದ್ದರು.

ಸಮ್ಮಾನ: ದಾನಿ ಗಣೇಶ್ ಕುಲಾಲ್ ಅವರನ್ನು ಸಮ್ಮಾನಿಸಲಾಯಿತು.

ವೈಷ್ಣವಿ ಕುಲಾಲ್ ಪ್ರಾರ್ಥಿಸಿ, ದ.ಕ. ಜಿಲ್ಲಾ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಸ್ವಾಗತಿಸಿ, ಪ್ರಸ್ತಾವಿಸಿದರು. ಕು| ಧನ್ಯಾ ಕುಲಾಲ್ ವಾಮಂಜೂರು ನಿರೂಪಿಸಿ, . ವಂದಿಸಿದರು.

ಬೆಳಿಗ್ಗೆ ಕ್ಷೇತ್ರದಲ್ಲಿ ತೋರಣ ಮುಹೂರ್ತ, ಗೋಪೂಜೆ ಮುಂತಾದ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಬಳಿಕ ಭಜನೆ, ಸಂಜೆ ಭಕ್ತಿರಸಮಂಜರಿ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯ ಪ್ರಸ್ತುತ ಪಡಿಸುವ ರಾಷ್ಟ್ರ-ಧರ್ಮ-ಸಂಸ್ಕೃತಿ ಜಾಗೃತಿಯ ಪುಣ್ಯಭೂಮಿ ಭಾರತ ಎಂಬ ನೃತ್ಯ ವೈವಿದ್ಯ ಜರಗಿತು.

ಕ್ಷೇತ್ರದಲ್ಲಿ ಇಂದು

ಮೇ ೧೭ರಂದು ಕ್ಷೇತ್ರದಲ್ಲಿ ಮಹಾಸುದರ್ಶನ ಯಾಗ, ಭಜನಾ ಸಂಕೀರ್ತನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆಯ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಬೆಳಗಾಗಿ ಕುಂಬಾರರ ಗುರುಪೀಠದ ಬಸವ ಗುಂಡಯ್ಯ ಸ್ವಾಮೀಜಿ, ಕಟೀಲಿನ ಅನಂತಪದ್ಮನಾಭ ಅಸ್ರಣ್ಣ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ ತುಳುನಾಡ ಸಂಸ್ಕೃತಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

Leave a Comment