Coastal Bulletin

ಯಾದಗಿರಿ: ಹೋಟೆಲ್‌ಗೆ ಊಟ ಮಾಡಲೆಂದು ಸ್ನೇಹಿತರ ಜೊತೆ ತೆರಳಿದ್ದ ಬಿಜೆಪಿ ಕಾರ್ಯಕರ್ತ ಹೋಟೆಲ್ ಕೆಲಸಗಾರನಿಂದಲೇ ಹತ್ಯೆಯಾಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಜಗಳ ಬಿಡಿಸಲು ಹೋದ ವ್ಯಕ್ತಿ ಶ್ರೀನಿವಾಸನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಘಟನೆ ಖಂಡಿಸಿ ಬಿಜೆಪಿ (BJP) ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆಯೂ ನಡೆದಿದೆ.

ಯಾದಗಿರಿ ನಗರದ ರಾಯಲ್ ಗಾರ್ಡನ್‌ಗೆ ಬಿಜೆಪಿ ಕಾರ್ಯಕರ್ತ ಶ್ರೀನಿವಾಸ ಹಾಗೂ ಸ್ನೇಹಿತರು ಊಟಕ್ಕೆಂದು ಹೋಗಿದ್ದರು. ಇನ್ನೇನು ಊಟ ಮುಗಿಸಿ ವಾಪಸ್ ಬರಬೇಕು ಎನ್ನುವಷ್ಟರಲ್ಲಿ ಪಾರ್ಕಿಂಗ್ ಮಾಡಿದ್ದ ಕಾರು ತೆಗೆಯುವ ವಿಚಾರಕ್ಕೆ

ಸಂಬಂಧಿಸಿದಂತೆ ಶ್ರೀನಿವಾಸ ಸ್ನೇಹಿತರ ಜೊತೆ ರಾಯಲ್ ಗಾರ್ಡನ್ ಹೋಟೆಲ್ ಮಾಲೀಕರ ಜಗಳ ಆರಂಭವಾಗಿದೆ. ಗಲಾಟೆ ಆಗೋದನ್ನ ಕಂಡಿದ್ದ ಶ್ರೀನಿವಾಸ ಜಗಳ ಬಿಡಿಸಲು ಹೋಗಿದ್ದಾನೆ. ಇದೇ ವೇಳೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ, ಮಹಮದ್ ಅನಾಸ್ ಹಾಗೂ ನಾಲೈದು ಜನ ಏಕಾಏಕೀ ಬಂದು ಚಾಕುವಿನಿಂದ ಶ್ರೀನಿವಾಸನ ಹೊಟ್ಟೆಗೆ ಇರಿದಿದ್ದಾರೆ. ಶ್ರೀನಿವಾಸ ಸ್ಥಳದಲ್ಲೇ ಕುಸಿದು ಬಿದ್ದು, ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

Leave a Comment