ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳದ ವತಿಯಿಂದ ಸಂಸ್ಥೆಯ ಸುವರ್ಣಮಹೋತ್ಸವದ ಅಂಗವಾಗಿ ಲಯನ್ಸ್ ಸಭಾಭವನದ ಲೋಕಾರ್ಪಣಾ ಕಾರ್ಯಕ್ರಮ ಹಾಗೂ ಸುವರ್ಣ ಸಂಭ್ರಮ ಸಮಾರಂಭವು ಮೇ 15ರಂದು ಸೋಮವಾರ ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ನಲ್ಲಿ ವಿಜ್ರಂಭಣೆಯಿಂದ ನಡೆಯಿತು.
ಲಯನ್ಸ್‌ನ ಅಂತರಾಷ್ಟ್ರೀಯ ನಿರ್ದೇಶಕ ಕೆ. ವಂಶೀಧರ್ ಬಾಬು ನೂತನ ಸಭಾಭವನವನ್ನು ಉದ್ಘಾಟಿಸಿ ಮಾತನಾಡಿ, ಸತತ 50ವರ್ಷಗಳ ನಿರಂತರ ಸೇವಾ ಚಟುವಟಿಕೆಗಳಿಂದ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಬಂಟ್ವಾಳ ಲಯನ್ಸ್ ಕ್ಲಬ್, ಸಭಾ ಭವನದಿಂದ ಬರುವ ಅದಾಯದ ಹಣವನ್ನು ಸಂಸ್ಥೆಯ ಸೇವಾ ಟ್ರಸ್ಟ್ ನಿಂದ ನಡೆಯುವ ವಿಶೇಷ ಚೇತನ ಮಕ್ಕಳ ಫಿಸಿಯೋಥೆರಪಿ ಕೇಂದ್ರದ ಚಟುವಟಿಕೆಗಳಿಗೆ ಬಳಸುವ ಕ್ಲಬ್‌ನ ಬದ್ದತೆ ಶ್ಲಾಘನೀಯ, ಬಂಟ್ವಾಳ ಕ್ಲಬ್ ತನ್ನ ಸೇವಾ ಚಟುವಟಿಕೆಗಳ ಮೂಲಕ ಮಾದರಿ ಕ್ಲಬ್ ಆಗಿ ಗುರುತಿಸಿ ಇಂದು ಸುವರ್ಣ ಸಂಭ್ರಮವನ್ನು ಆಚರಿಸುವುದು ನಮ್ಮೆಲ್ಲರಿಗೆ ಹೆಮ್ಮೆ ಹಾಗೂ ಗೌರವ ಎಂದು ಹೇಳಿದರು.
ಪೂರ್ವ ಅಂತರಾಷ್ಟ್ರೀಯ ನಿರ್ದೇಶಕ ವಿ.ವಿ. ಕೃಷ್ಣ ರೆಡ್ಡಿ ಹಾಗೂ ಜಿಲ್ಲಾ ಗವರ್ನರ್ ಎಸ್. ಸಂಜಿತ್ ಶೆಟ್ಟಿ ಶುಭ ಕೋರಿದರು. ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಂಸ್ಥೆಯ ಸ್ಥಾಪಾಕಾಧ್ಯಕ್ಷ ಡಾ, ವಸಂತ ಬಾಳಿಗ, ಸತೀಶ್ ಕುಡ್ವ ಹಾಗೂ ಶ್ಯಾಂ ಭಟ್ ಅವರನ್ನು ಗೌರವಿಸಲಾಯಿತು. ನೂತನ ಸಭಾಭವನಕ್ಕೆ
ವಿಶೇಷ ಆರ್ಥಿಕ ಸಹಕಾರ ನೀಡಿದ ಕ್ಲಬ್ಬಿನ ಸದಸ್ಯರನ್ನು ಗೌರವಿಸಲಾಯಿತು. ಸ್ಮರಣ ಸಂಚಿಕೆ ಸ್ವರ್ಣ ಪಥವನ್ನು ಲಯನ್ಸ್ ಜಿಲ್ಲಾ ಗವರ್ನರ್ ಸಂಜಿತ್ ಶೆಟ್ಟಿ ಬಿಡುಗಡೆಗೊಳಿಸಿದರು. ಸಂಸ್ಥೆ ನಡೆದು ಬಂದ ಇತಿಹಾದವನ್ನು ಮೆಲುಕು ಹಾಕುವ ಸಾಕ್ಷ ಚಿತ್ರ ಪ್ರದರ್ಶಿಸಲಾಯಿತು.
ಚುನಾಯಿತ ಜಿಲ್ಲಾ ಗವರ್ನರ್ ಡಾ. ಮೆಲ್ವಿನ್ ಡಿಸೋಜಾ, ಚುನಾಯಿತ ದ್ವಿತೀಯ ಉಪಗವರ್ನರ್ ಅರವಿಂದ ಶೆಣೈ, ಲಯನ್ಸ್ ಕ್ಲಬ್ ಬಂಟ್ವಾಳದ ಸ್ಥಾಪಕಾಧ್ಯಕ್ಷ ಡಾ. ಬಿ. ವಸಂತ ಬಾಳಿಗ, ಪ್ರಾಂತೀಯ ಅಧ್ಯಕ್ಷ ಲಕ್ಷ್ಮಣ್ ಕುಲಾಲ್, ಕ್ಲಬ್ ಕಾರ್ಯದರ್ಶಿ ಬಿ. ಶಿವಾನಂದ ಬಾಳಿಗ, ಕೋಶಾಧಿಕಾರಿ ಜಗದೀಶ್ ಬಿ.ಎಸ್., ಸುವರ್ಣ ಸಂಭ್ರಮ ಸಮಿತಿ ಕಾರ್ಯದರ್ಶಿ ಮದ್ವರಾಜ್ ಬಿ. ಕಲ್ಮಾಡಿ, ಜಯಂತ್ ಶೆಟ್ಟಿ, ಲಯನ್ಸ್ ಸೇವಾ ಟ್ರಸ್ಟ್ ಕೋಶಾಧಿಕಾರಿ ಸುನೀಲ್ ಬಿ ಅಪೂರ್ವ . ಲಿಯೋ ಅಧ್ಯಕ್ಷೆ ಭುವಿ ಕಾರಂತ್ ಮೊದಲಾದವರು ಉಪಸ್ಥಿತರಿದ್ದರು..ದಾಮೋದರ ಬಿ ಎಂ ಸಹಕರಿಸಿದರು. ಸ್ಮರಣ ಸಂಭ್ರಮ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಸ್ವಾಗತಿಸಿದರು. ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ವಸಂತ ಕುಮಾರ್ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ನಿಕಟಪೂರ್ವ ಕಾರ್ಯದರ್ಶಿ ರಾಧಕೃಷ್ಣ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು.















