ಕಳ್ಳಿಗೆ :ಶಾಸಕ ರಾಜೇಶ್ ನಾಯ್ಕ್ ರಿಂದ ಕ್ಯಾ.ಬ್ರಿಜೇಶ್ ಚೌಟ ಪರ ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ.

Coastal Bulletin
ಕಳ್ಳಿಗೆ :ಶಾಸಕ ರಾಜೇಶ್ ನಾಯ್ಕ್ ರಿಂದ ಕ್ಯಾ.ಬ್ರಿಜೇಶ್ ಚೌಟ ಪರ ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ.

ಬಂಟ್ವಾಳ :ಎ. 26 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡುವ ನಿಟ್ಟಿನಲ್ಲಿ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ" ಎಂಬ ನೂತನ ಕಾರ್ಯಕ್ರಮ ಆಯೋಜಿಸಿದ್ದು, ಎ.16 ರಂದು ಬಂಟ್ವಾಳದ ಕಳ್ಳಿಗೆ ಗ್ರಾಮದ ಬೆಂಜನಪದವು ,ದರಿಬಾಗಿಲು, ಚಂದ್ರಿಗೆ,ಗಾಂದೋಡಿ ಮತದಾರರ ಮನೆಗೆ ಬೇಟಿ ನೀಡಿ ಮತಯಾಚನೆ ನಡೆಸಿದರು. ಲೋಕಸಭಾ ಅಭ್ಯರ್ಥಿಯ ಪರಿಚಯ ಪತ್ರ,ಹಾಗೂ ಮೋದಿ ಸರಕಾರದ ಅವಧಿಯಲ್ಲಿ ನಡೆಸಲಾದ ಯೋಜನೆಗಳ ಮಾಹಿತಿ ಕರಪತ್ರವನ್ನು ಮತದಾರರಿಗೆ ಶಾಸಕ ರಾಜೇಶ್ ,ಮಾಜಿ ಶಾಸಕ ಎ‌.ರುಕ್ಮಯ ಪೂಜಾರಿ ಹಾಗೂ ಜಿ‌ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಜೊತೆಯಾಗಿ ನೀಡಿದರು.

ಗ್ರಾಮ ಗ್ರಾಮದಲ್ಲಿ ಬಿಜೆಪಿಯನ್ನು ಸಂಘಟನೆ ಮಾಡಿದಾಗ ರಾಜ್ಯ,ರಾಷ್ಟ್ರದಲ್ಲಿ ಬಿಜೆಪಿಯ ಗೆಲುವು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಹಾಗಾಗಿ ಚುನಾವಣಾ ದಿನದಂದು ಬಿಜೆಪಿಯ ಮತದಾರರನ್ನು ಕಡ್ಡಾಯವಾಗಿ ಮತದಾನ ಮಾಡುವಂತಹ ಜವಬ್ದಾರಿಯನ್ನು ಕಾರ್ಯಕರ್ತರು ಮಾಡಬೇಕು ಎಂದು ಮನವಿ ಮಾಡಿದರು.ಚುನಾವಣೆಯಲ್ಲಿ ಜಾತಿ ಮುಖ್ಯವಲ್ಲ ,ದೇಶ ಮುಖ್ಯ,ದೇಶ ಉಳಿದರೆ ನಾವು ಉಳಿಯುತ್ತೇವೆ, ದೇಶ ಉಳಿದರೆ ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯದ ಚಿಂತನೆ ಮಾಡಬಹುದು. ಮಕ್ಕಳ ಉತ್ತಮ

ಜೀವನಕ್ಕೆ ಮೋದಿಯವರ ಆಡಳಿತದಿಂದ ಮಾತ್ರ ಸಾಧ್ಯ ಎಂದು ಅವರು ತಿಳಿಸಿದರು.

ಕಳ್ಳಿಗೆ ಗ್ರಾ.ಪಂ.ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಸದಸ್ಯರಾದ ದಾಮೋದರ ನೆತ್ತರಕೆರೆ, ರೇಶ್ಮಾ,ಮನೋಜ್ ಕಳ್ಳಿಗೆ ಪ್ರಮುಖರಾದ ದಿನೇಶ್ ಶೆಟ್ಟಿ ದಂಬೆದಾರ್, ಯೋಗೀಶ್ ದರಿಬಾಗಿಲು, ಅಖೇಶ್ ಬೆಂಜನಪದವು ಅಭಿನ್ ರೈ, ಪ್ರವೀಣ್ ಬೆಂಜನಪದವು, ಶಾರದ ಕೋಟೇಶ್,ವಸಂತಿ ಮನೋಹರ್, ಸುಗಂದಿ ಕಮಲಾಕ್ಷ, ನಮಿತಾಸುರೇಶ್, ಕಾರ್ತಿಕ್ ಬೆಂಜನಪದವು,ಪ್ರದೀಪ್ ಬೆಂಜನಪದವು,ಸಾತ್ವಿಕ್, ಯಶೋಧರ,ಕೇಶವ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

Leave a Comment