ಬಂಟ್ವಾಳ :ಕೇಂದ್ರ, ರಾಜ್ಯ ಸರ್ಕಾರದ ವಿದ್ಯಾರ್ಥಿ ವಿರೋದಿ ದೋರಣೆಯನ್ನು ಖಂಡಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ ಎಸ್ ಯು ಐ) ಸಮಾನ ಮನಸ್ಕ ಸಂಘಟನೆಗಳ ಸಹಯೋಗದೊಂದಿಗೆ ಪದವಿ ಕಾಲೇಜು ಬಂದ್ ಮಾಡಿ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಎನ್ ಎಸ್ ಯು ಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬೆ ಹೇಳಿದರು.
ಆವರು ಬಿಸಿರೋದ್ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿ ವೇತನ ತಡೆ ಹಿಡಿದು ಕಾಲೇಜು ಪ್ರವೇಶ ಶುಲ್ಕ ಹೆಚ್ಚಿಸಲಾಗಿದೆ, ಪ್ರಿ ಹಾಗೂ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕೆ ಎನ್ ಎಸ್ ಪಿ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದರು ಸರ್ಕಾರ ವೇತನ ಸಂದಾಯ ಮಾಡಿಲ್ಲ, ಮಂಗಳೂರು ವಿ ವಿ ಯಲ್ಲಿ ಸೆಮಿಸ್ಟರ್ ಪರೀಕ್ಷೆ ನಡೆದು 8 ತಿಂಗಲಾದರೂ ಫಲಿತಾಂಶ
ಪ್ರಕಟಿಸಿಲ್ಲ, ಅಸಮರ್ಪಕ ಎನ್ ಇ ಪಿ ನೀತಿ, ವಿದ್ಯಾರ್ಥಿಗಳಿಗೆ ಬಸ್ ಪಾಸ್ ದರ ಏರಿಕೆ, ಮುಂತಾದ ವಿವಿಧ ಬೇಡಿಕೆ ಈಡೇರಿಕೆಯ ಸಲುವಾಗಿ ಡಿ 17ರಂದು ತರಗತಿಗಳನ್ನು ಬಹಿಸ್ಕರಿಸಿ ಮಂಗಳೂರಿನಲ್ಲಿ ಪ್ರತಿಭಟನೆ ಮಾಡಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಎನ್ ಎಸ್ ಯು ಐ ರಾಜ್ಯ ಸಂಯೋಜಕ ವಿನಯ ಕುಮಾರ್ ಸಿಂದ್ಯಾ, ಬಂಟ್ವಾಳ ಕ್ಷೇತ್ರ ಉಪಾಧ್ಯಕ್ಷ ಶಾರುಖ್ ಎ ಕೆ ಪಾರ್ಲಿಯಾ, ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.














