Coastal Bulletin

ಬಂಟ್ವಾಳ: ಇಲ್ಲಿನ ಅದಿಶಕ್ತಿ, ಭದ್ರಕಾಳಿ ಸೇವಾ ಸಮಿತಿಯ ಆಶ್ರಯದಲ್ಲಿ ಪಣೆಕಳ ಮಣಿಹಳ್ಳ ಶ್ರೀ ದುರ್ಗಾಂಭ ಮಹಮ್ಮಾಯಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸರ್ವೈಶ್ಚರ್ಯ ಪೂಜೆ, ಗುರುವಂದನಾ ಹಾಗೂ "ಅಗಮ ಪ್ರವೀಣ" ಬಿರುದು ಪ್ರಧಾನ ಕಾರ್ಯಕ್ರಮ ಡಿ.18 ರಂದು ನಡೆಯಲಿದೆ ಎಂದು ಶ್ರೀಮಹಮ್ಮಾಯಿ ದುರ್ಗಾಂಭ ಟ್ರಸ್ಟ್ ನ ಪ್ರ.ಕಾರ್ಯದರ್ಶಿ ಮಹಾಬಲ ಬಂಗೇರ ತಿಳಿಸಿದ್ದಾರೆ.

ಗುರುವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ‌ಈ ಬಗ್ಗೆ ಮಾಹಿತಿ‌ ನೀಡಿದ ಅವರು  ಪಣೆಕಲ ಶ್ರೀದುರ್ಗಾಂಭ ದೇವಸ್ಥಾನದ      ಜೀರ್ಣೋದ್ದಾರ ಕಾರ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಅದರ ವಿಜ್ಞಾಪನಾ ಪತ್ರದ ಬಿಡುಗಡೆಯು ಅಂದು ನಡೆಯಲಿದೆ ಎಂದರು.

ಅಳದಂಗಡಿ ಅರಮನೆಯ  ಶ್ರೀ ಡಾ. ಪದ್ಮಪ್ರಸಾದ್ ಅಜಿಲರ ಉಪಸ್ಥಿತಿ,ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನ,ಬ್ರಹ್ಮ ಶ್ರೀ ಕುಂಟಾರು ರವೀಶ್ ತಂತ್ರಿಗಳ ನೇತೃತ್ವದಲ್ಲಿ ಇದೇ ಮೊದಲಬಾರಿಗೆ ಬಂಟ್ವಾಳದಲ್ಲಿ ಲೋಕಕಲ್ಯಾಣಾರ್ಥವಾಗಿ ಸರ್ವೈಶ್ಚರ್ಯ ಪೂಜೆ ನಡೆಸಲಾಗುತ್ತಿದೆ. ಹಿಂದುಳಿದವರ್ಗಕ್ಕೆ ಸೇರಿದ ಪಣೆಕಲ ವಸಂತ ಭಟ್ ಅವರ ವೈಧಿಕ, ಧಾರ್ಮಿಕ ಸೇವಾ ಕೈಂಕರ್ಯವನ್ನು ಗುರುತಿಸಿ ಅವರಿಗೆ "ಅಗಮ ಪ್ರವೀಣ" ಬಿರುದು ಉಪಾದಿಯನ್ನು

ಕುಂಟಾರು ರವೀಶ್ ತಂತ್ರಿಯವರು ಪ್ರಧಾನಗೈದು ಗೌರವಿಸಲಿದ್ದಾರೆ ಎಂದರು.

ಇದೇ ವೇಳೆ ದ.ಕ.ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಸೇಸಪ್ಪಕೋಟ್ಯಾನ್ ಅವರನ್ನು ಸನ್ಮಾನಿಸಲಾಗುವುದು ಈ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಸಚಿವರುಗಳಾದ  ಸುನಿಲ್ ಕುಮಾರ್,  ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್,  ಶಾಸಕರುಗಳಾದ ರಾಜೇ‌ಶ್ ನಾಯ್ಕ ಉಳಿಪಾಡಿಗುತ್ತು, ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್‌, ಮಾಜಿ ಸಚಿವರಾದ ಬಿ. ರಮಾನಾಥ ರೈ ಸಹಿತ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಹಾಬಲ ಬಂಗೇರ ತಿಳಿಸಿದರು.

ಶ್ರೀ ಆದಿಶಕ್ತಿ ಕ್ಷೇತ್ರದ ಸಮಿತಿ ಅಧ್ಯಕ್ಷ ಲೋಕೇಶ್ ಭಟ್,ಶ್ರೀ ಮಹಮ್ಮಾಯಿ ದುರ್ಗಾಂಭ ಟ್ಎಸ್ಟ್ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ,ಜೀಣೋದ್ದಾರ ಸಮಿತಿಯ ಪ್ರ.ಕಾರ್ಯದರ್ಶಿ ದೇವಪ್ಪ ಕುಲಾಲ್,ಸಂಜೀವ ಮೂಲ್ಯ,ಉಮೇಶ್ ಕುಲಾಲ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

Leave a Comment