ಫರಂಗಿಪೇಟೆ: ಶ್ರೀ ರಾಮ ವಿಧ್ಯಾ ಸಂಸ್ಥೆಯಲ್ಲಿ ರೂ 25 ಲಕ್ಷ ವೆಚ್ಚದ ತರಗತಿ ಕೊಠಡಿಗಳಿಗೆ ಶಿಲಾನ್ಯಾಸ.

Coastal Bulletin
ಫರಂಗಿಪೇಟೆ: ಶ್ರೀ ರಾಮ ವಿಧ್ಯಾ ಸಂಸ್ಥೆಯಲ್ಲಿ ರೂ 25 ಲಕ್ಷ ವೆಚ್ಚದ ತರಗತಿ ಕೊಠಡಿಗಳಿಗೆ ಶಿಲಾನ್ಯಾಸ.

ಬಂಟ್ವಾಳ :ಮಂಗಳೂರು ತಾಲೂಕು ಅರ್ಕುಳ ಶ್ರೀರಾಮ ವಿದ್ಯಾ ಸಂಸ್ಥೆಗೆ ಓ ಏನ್ ಜಿ ಸಿ ಯ ಸಿ ಎಸ್ ಆರ್ ಫಂಡ್ ನಿಂದ ೨೫ ಲಕ್ಷ ಗಳ ತರಗತಿ ಕೊಠಡಿಗೆ ಶಿಲಾನ್ಯಾಸ ವನ್ನು ಓ ಎನ್ ಜಿ ಸಿ ಯ ಸಿ ಎಸ್ ಆರ್ ವಿಭಾಗದ ಸೀನಿಯರ್ ಮ್ಯಾನೇಜರ್ ನಾಗರಾಜ್ ರಾವ್ ರವರು ನೆರವೇರಿಸಿದರು , ಪೊಳಲಿ ಗಿರಿ ಪ್ರಕಾಶ್ ತಂತ್ರಿ ಯವರು ಪೌರೋಹಿತ್ಯ ವಹಿಸಿದರು.

ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಎ ಕೆ ಜಯರಾಮ ಶೇಕ , ಸಂಚಾಲಕ ರಾದ ಎ ಗೋವಿಂದ ಶೆಣೈ , ಕೆನರಾ ಬ್ಯಾಂಕ್ ಅರ್ಕುಳ ಶಾಖೆಯ ಮ್ಯಾನೇಜರ್ ರಾಜೇಶ್ ,ಕೃಷ್ಣಕುಮಾರ್ ಪೂಂಜಾ , ಪೊಳಲಿ ರಾಧಾಕೃಷ್ಣ

ತಂತ್ರಿ , ಶಾಲಾ ಮುಖ್ಯ ಶಿಕ್ಷಕ ದೇವದಾಸ್ ಕೆ ಆರ್ , ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶೈಲಜಾ , ಸುಕುಮಾರ್ , ಲಕ್ಷ್ಮಣ ಕುಂಪಣಮಜಲು , ದಿನೇಶ್ ಶೆಟ್ಟಿ ಕೊಟ್ಟಿಂಜ , ಗುತ್ತಿಗೆದಾರ ಸುಕೇಶ್ ಶೆಟ್ಟಿ ತೇವು ಉಪಸ್ಥಿತರಿದ್ದರು

Leave a Comment