Coastal Bulletin

ಬಂಟ್ವಾಳ : ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಇದರ ನೇತೃತ್ವದಲ್ಲಿ ಕಾರಿಂಜೇಶ್ವರನ ಪವಿತ್ರ ಕ್ಷೇತ್ರದ ಸಂರಕ್ಷಣೆಗಾಗಿ ಬೃಹತ್ ಜನ ಜಾಗೃತಿ ಸಭೆಯು ನವೆಂಬರ್ 21ನೇ ಆದಿತ್ಯವಾರ ಮಧ್ಯಾಹ್ನ 3.30ರಿಂದ ಕಾರಿಂಜ ದೇವಸ್ಥಾನದ ರಥ ಬೀದಿಯಲ್ಲಿ ನಡೆಯಲಿದೆ

"ರುದ್ರಗಿರಿಯ ರಣಕಹಳೆ"ಎಂಬ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ, ಬಂಟ್ವಾಳ ಘಟಕ ಇದರ ಕಾರ್ಯದರ್ಶಿ ಪದ್ಮನಾಭ ಮಯ್ಯ ಅಧ್ಯಕ್ಷತೆ ವಹಿಸಲಿದ್ದು, ಹಿಂ. ಜಾ.ವೇ. ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ್ ಪ್ರಧಾನ ಭಾಷಣ ಮಾಡಲಿದ್ದಾರೆ.

ಮದ್ಯಾಹ್ನ 1 ಗಂಟೆಯಿಂದ ಬಿ ಸಿ

ರೋಡ್ ರಕ್ತೇಶ್ವರಿ ದೇವಸ್ಥಾನದಿಂದ ವಗ್ಗ ಜಂಕ್ಷನ್ ವರೆಗೆ ವಾಹನ ಜಾಥಾ ನಡೆಯಲಿದ್ದು, 2.30 ಗಂಟೆಯಿಂದ ವಗ್ಗ ದಿಂದ ಕಾರಿಂಜ ರಥಬೀದಿಗೆ ಕಾಲ್ನಡಿಗೆಯ ಭವ್ಯ ಶೋಭಾ ಯಾತ್ರೆಯು ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಹಿಂ ಜಾ ವೇ ಬಂಟ್ವಾಳ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment