ಐಟಿ ಗೆ ಕೋಟಿ ಕೋಟಿ.... ಮತ್ತೊಬ್ಬ ಕೋಟ್ಯಧಿಪತಿ ಬಿಲ್ಡರ್ ಐಟಿ ಬಲೆಗೆ

Coastal Bulletin
ಐಟಿ ಗೆ ಕೋಟಿ ಕೋಟಿ.... ಮತ್ತೊಬ್ಬ ಕೋಟ್ಯಧಿಪತಿ ಬಿಲ್ಡರ್ ಐಟಿ ಬಲೆಗೆ

ಬೆಂಗಳೂರು: ರಾಜ್ಯದಲ್ಲಿ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳ ಬೇಟೆಯು ಶನಿವಾರವು ಮುಂದುವರಿದಿದ್ದು,ದಾಳಿಯಲ್ಲಿ ಮತ್ತೊಬ್ಬ ಕೋಟ್ಯಧಿಪತಿ ಗುತ್ತಿಗೆದಾರ ಸಿಕ್ಕಿಬಿದ್ದಿದ್ದು, 45 ಕೋಟಿಗೊ ಹೆಚ್ಚು ಹಣ ಪತ್ತೆಯಾಗಿದೆ.

ಗುತ್ತಿಗೆದಾರ ಅಂಬಿಕಾಪತಿ ಮಕ್ಕಳ ಮನೆಯಲ್ಲಿ ಮಂಚದ ಕೆಳಗೆ ಸಿಕ್ಕ 42 ಕೋಟಿ ರೂ. ಬೆನ್ನಲ್ಲೇ ಈ ದಾಳಿ ನಡೆದಿದೆ. ರಾಜಾಜಿನಗರದ ಕೇತಮಾರನಹಳ್ಳಿಯಲ್ಲಿರುವ ಬಿಲ್ಡರ್ ವೊಬ್ಬರ ಅಪಾರ್ಟ್‌ ಮೆಂಟ್ ಮೇಲೆ ಐಟಿ ಅಧಿ ಕಾರಿಗಳು ದಾಳಿ ನಡೆಸಿದ್ದು, 45 ಕೋಟಿ ರೂ.ಗಿಂತ

ಅಧಿಕ ನಗದು ಸಿಕ್ಕಿದೆ. ಗುತ್ತಿಗೆದಾರ ಸಂತೋಷ ಕೃಷ್ಣಪ್ಪ ಅವರ ಅಪಾರ್ಟ್ ಮೆಂಟ್ ಮೇಲೆ ನಡೆದ ದಾಳಿಯಲ್ಲಿ ಈ ಹಣ ಪತ್ತೆಯಾಗಿದೆ. ಆರಕ್ಕೂ ಹೆಚ್ಚಿನ ಕಾರುಗಳಲ್ಲಿ ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. 4 ದಿನಗಳಲ್ಲಿ ಇದೇ ದೊಡ್ಡ ದಾಳಿಯಾಗಿದೆ.

Leave a Comment