ಬಂಟ್ವಾಳ :ಶ್ರೀ ಶಾರದಾ ಪೂಜಾ ಸೇವಾ ವೇದಿಕೆ ಕೊಡ್ಮಾಣ್ ಇವರ ಅಶ್ರಯದಲ್ಲಿ ನಡೆಯುವ 36ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಸೆ 15ರಂದು ಆದಿತ್ಯವಾರ ಕೊಡ್ಮಾಣ್ ಶಾಲಾ ಭವನದಲ್ಲಿ ನಡೆಯಿತು.
ಹಿರಿಯರಾದ ನಾರಾಯಣ ಪೂಜಾರಿ ಪಕ್ಕೊಳಿಮಾರ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಮೆರಮಜಲು ಗ್ರಾ ಪಂ ಅಧ್ಯಕ್ಷ ಸತೀಶ ನಾಯ್ಗ ಕೊಡ್ಮಾಣ್ ಕೊಡಿ, ಶ್ರೀ
ಶಾರದಾ ಪೂಜಾ ಮಹೋತ್ಸವ ಸಮಿತಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಕೊಟ್ಟಿಂಜ, ಪ್ರ ಕಾರ್ಯದರ್ಶಿ ವಿನೋದ್ ಕೊಡ್ಮಾಣ್, ಕೋಶಾಧಿಕಾರಿ ಸಂತೋಷ್ ಕೊಡ್ಮಾಣ್ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.















