ಜ್ಯೋತಿಗುಡ್ಡೆ: "ಸಸ್ಯನಾರಾಯಣ"ಎಂಬ ಭಕ್ತಿ ಭಾವ ಜಾಗೃತಿಯ ವಿಶಿಷ್ಟ ಕಾರ್ಯಕ್ರಮ.

Coastal Bulletin
ಜ್ಯೋತಿಗುಡ್ಡೆ: "ಸಸ್ಯನಾರಾಯಣ"ಎಂಬ ಭಕ್ತಿ ಭಾವ ಜಾಗೃತಿಯ ವಿಶಿಷ್ಟ ಕಾರ್ಯಕ್ರಮ.

ಬಂಟ್ವಾಳ:ತಾಲೂಕಿನ ಕಳ್ಳಿಗೆ ಗ್ರಾಮದ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ನಿದಿಯಲ್ಲಿ ಸುಮಾರು 16 ವರುಷಗಳಿಂದ ನಡೆಸಿಕೊಂಡು ಬರುತ್ತಿರುವ, ಕ್ಷೇತ್ರದ ಹಾಗೂ ಭಕ್ತರ ನಡುವಿನ ಬಾಂದವ್ಯ ನಿರಂತರವಾಗಿ ವೃದ್ಧಿಯಾಗಿ ಭಕ್ತಿ ಭಾವ ಜಾಗೃತವಾಗಲು ಪ್ರತಿಯೊಬ್ಬ ಭಕ್ತರಿಗೂ ಔಷದಿಯ ಗುಣವುಳ್ಳ ಸಸಿಗಳನ್ನು ವಿತರಣೆ ಮಾಡುವ ಮೂಲಕ ಸಸ್ಯನಾರಾಯಣ ಕಾರ್ಯಕ್ರಮವನ್ನು ಆ. 16ರಂದು ಶನಿವಾರ ವಿಶಿಷ್ವವಾಗಿ ಆಚರಿಸಲಾಯಿತು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಸಂಚಾಲಕರಾದ ನಾರಾಯಣ ನಾಯ್ಕ್ ವಹಿಸಿದ್ದರು, ಅತಿಥಿಗಳಾಗಿ ಜಿಲ್ಲಾ ಸಂಪರ್ಕಧಿಕಾರಿ ಲಯನ್ಸ್ ಜಿಲ್ಲೆ ಸುದರ್ಶನ್ ಪಡಿಯಾರ್, ನಾಗರಾಜ್ ಬಜಾಲ್ ಹಸಿರು ದಳ ಮಂಗಳೂರು, ಪರಿಸರ ಪ್ರೇಮಿ ದಾಮೋದರ ಸಂಚಯಗಿರಿ, ಕಳ್ಳಿಗೆ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಶಿವುಲಾಲ್ ಚೌಹಾಣ್, ಸೇವಾ ಸಮಿತಿಯ ಅಧ್ಯಕ್ಷ ಯಶವಂತ ಮುಂಡಾಜೆ ಉಪಸ್ಥಿತರಿದ್ದರು.


ಸಾಧಕರಿಗೆ ಸನ್ಮಾನ:

ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಧಕರಾದ ಸದಾಶಿವ ಡಿ ತುಂಬೆ ಹಾಗೂ ಮನೋಜ್ ಕನಪಾಡಿ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.

ಕ್ಷೇತ್ರದ ಟ್ರಸ್ಟಿ ತಾರಾನಾಥ ಕೊಟ್ಟಾರಿ ಪ್ರಾಸ್ತವಿಕವಾಗಿ ಮಾತನಾಡಿ ಶ್ರೀ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು, ಶ್ರೀನಾಥ್ ಗುಂಡಿಬೆಟ್ಟು ಸ್ವಾಗತಿಸಿ, ಯಶವಂತ ಮುಂಡಾಜೆ ಧನ್ಯವಾದವಿತ್ತರು.ಕ್ಷೇತ್ರದ ಪ್ರ ಕಾರ್ಯದರ್ಶಿ ಉದಯಕುಮಾರ್ ಜ್ಯೋತಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.

Leave a Comment