ಬಂಟ್ವಾಳ :ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯತ್ ಮತ್ತು ಮಾನಸ ಸಂಜೀವಿನಿ ಒಕ್ಕೂಟ ಇದರ ಜಂಟಿ ಆಶ್ರಯದಲ್ಲಿ ಕರಿಯಂಗಳ ಗ್ರಾಮ ಪಂಚಾಯತ್ ನ ಎನ್.ಆರ್.ಎಲ್.ಎಮ್ ನ ಸಭಾಂಗಣದಲ್ಲಿ "ಆಟಿದ ಗಮ್ಮತ್ " ಕಾರ್ಯಕ್ರಮ ಮತ್ತು ವಿವಿಧ ಮನೋರಂಜನಾ ಆಟೋಟಗಳು ಆ 13ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರಿಮತಿ ರಾಧಾ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಶ್ರೀ ಸಚಿನ್ ಕುಮಾರ್ ಮಾನ್ಯ ಕಾರ್ಯ ನಿರ್ವಹಣಾಧಿಕಾರಿ ತಾಲೂಕು ಪಂಚಾಯತ್ ಬಂಟ್ವಾಳ ಹಾಗೂ ಶ್ರೀ ಪ್ರದೀಪ್, ಶ್ರೀ ಸುಶಾನ್.ಬಿ.ಕೆ ತಾಂತ್ರಿಕ ಅಭಿಯಂತರರು ನರೇಗಾ, ಶ್ರೀಮತಿ ಸುವಾಸಿನಿ ಗ್ರಾಮ ಆಡಳಿತ ಅಧಿಕಾರಿ, ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ಮಾಲಿನಿ.ಬಿ.ವಿ, ಕೆ.ಎಂ ಅಬೂಬಕ್ಕರ್
ಗುತ್ತಿಗೆದಾರರು, ಶ್ರೀಮತಿ ಪೂರ್ಣಿಮಾ ಅಧ್ಯಕ್ಷರು ಮಾನಸ ಸಂಜೀವಿನಿ ಒಕ್ಕೂಟ, ಶ್ರೀಮತಿ ವಸಂತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕು.ಭಾರತಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಗ್ರಾಮ ಪಂಚಾಯತ್ ನ ಸರ್ವ ಸದಸ್ಯರು, ಸಂಜೀವಿನಿ ಒಕ್ಕೂಟದ ಸರ್ವ ಸದಸ್ಯರು, ಸಿಬ್ಬಂದಿ ವರ್ಗ ದವರು, ಗ್ರಾಮಸ್ಥರು ಭಾಗವಹಿಸಿದ್ದರು.
ಗ್ರಾ ಪಂ ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.















