Coastal Bulletin

ಬಂಟ್ವಾಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ), ಬಿ.ಸಿ ಟ್ರಸ್ಟ್ ನ ಮಾಣಿ ವಲಯದ ನೂತನ ಪದಾಧಿಕಾರಿಗಳ ಸಮಾರಂಭ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಿತು. ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ(ರಿ) ಉಡುಪಿ ಇದರ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲ್ಯಾನ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.

ಉಪನ್ಯಾಸಕರಾದ ರಮೇಶ್ ಎಂ. ಬಾಯಾರು, ಯೋಜನೆಯ ನಿರ್ದೇಶಕ ಪ್ರವೀಣ್ ಕುಮಾರ್, ಮಾಣಿ ವಲಯ ಒಕ್ಕೂಟದ ಅಧ್ಯಕ್ಷ ತನಿಯಪ್ಪ ಗೌಡ, ಜನಜಾಗೃತಿ ವಲಯ ಅಧ್ಯಕ್ಷರಾದ ರಾಜಾರಾಮ್ ಶೆಟ್ಟಿ ಕೊಲ್ಪೆಗುತ್ತು, ಸಚ್ಚಿದಾನಂದ ಪೂಜಾರಿ ಕೊಪ್ಪರಿಗೆ,ಮಾಣಿ

ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ವಿ.ಕೆ ಇಸ್ಮಾಯಿಲ್, ವಲಯ ಮೇಲ್ವಚಾರಕಿ ವಿನೋದ ಉಪಸ್ಥಿತರಿದ್ದರು.

ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ ಸ್ವಾಗತಿಸಿ, ಸೇಸಮ್ಮ ವಂದಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment