Coastal Bulletin

ಬಂಟ್ವಾಳ: ಗುರುಪೂರ್ಣಿಮೆ ದಿನಾಚರಣೆಯ ಪ್ರಯುಕ್ತ ಗುರುವಂದನ ಕಾರ್ಯಕ್ರಮ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆಯಿತು. ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಗೈದು ಅತಿಥಿಗಳಿಂದ ತಿಲಕ ಧಾರಣೆಯ ಮೂಲಕ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ನಿವೃತ್ತ ಗುರುಗಳಾದ ಸುಬ್ರಮಣ್ಯ ಭಟ್ ಬಡಕ್ಕಿಲ, ನಿವೃತ್ತ ಮುಖ್ಯೋಪಾಧ್ಯಾಯರಾದ ಕಾಂಚನ ವೆಂಕಟ ಸುಬ್ರಹ್ಮಣ್ಯ ಅಯ್ಯರ್ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯಿನಿ ವಸಂತಿ ಕುಮಾರಿ, ನಿವೃತ್ತ ಅಧ್ಯಾಪಕರು ಕೇಶವ್ ಆಚಾರ್ ಇವರಿಗೆ ಗುರುವಂದನೆಯ ಮೂಲಕ ಗೌರವಿಸಲಾಯಿತು.

ಇದೇ ವೇಳೆ ಮಾತನಾಡಿದ ಸುಬ್ರಹ್ಮಣ್ಯ ಭಟ್ ಬಡಕ್ಕಿಲ ವಿದ್ಯಾರ್ಥಿಗಳ ಜೀವನದಲ್ಲಿ ಗುರುವಿನ

ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಶ್ರೀರಾಮ ವಿದ್ಯಾಕೇಂದ್ರದ ಸಹ ಸಂಚಾಲಕರಾದ ರಮೇಶ್ ಶ್ರೀಮಾನ್ ವಿದ್ಯಾರ್ಥಿಗಳನ್ನು ಹರಸಿದರು.

ಮುಖ್ಯೋಪಾಧ್ಯಾಯರಾದ ಶಾಂಭವಿ ಮಾತಾಜಿ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಕಲ್ಲಡ್ಕ ವಲಯ ಮಟ್ಟದ ಶಟಲ್ ಬ್ಯಾಟ್ಮಿಂಟನ್ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿ ಮನಸ್ವಿಕಾರ್ಯಕ್ರಮ ನಿರೂಪಿಸಿದರು. ಅನುಷಾ ಆಳ್ವ ಸ್ವಾಗತಿಸಿ, ಉಮಾ ಭಾರತಿ ವಂದಿಸಿದಳು.

Leave a Comment