ಬಿ ಸಿ ರೋಡ್: ಕಟ್ಟಡ ಕಾರ್ಮಿಕರಿಗೆ ಉಚಿತ ನೋಂದಣಿ ಹಾಗೂ ಮಾಹಿತಿ ಕಾರ್ಯಾಗಾರ.

Coastal Bulletin
ಬಿ ಸಿ ರೋಡ್: ಕಟ್ಟಡ ಕಾರ್ಮಿಕರಿಗೆ ಉಚಿತ ನೋಂದಣಿ ಹಾಗೂ ಮಾಹಿತಿ ಕಾರ್ಯಾಗಾರ.

ಬಂಟ್ವಾಳ :ತಾಲೂಕು ಪಂಚಾಯತ್ ಬಂಟ್ವಾಳ, ಸೀನಿಯರ್ ಛೇಂಬರ್ ಬಂಟ್ವಾಳ ನೇತ್ರಾವತಿ ಸಂಗಮ, ರೋಟರಿ ಕ್ಲಬ್ ಮೊಡಂಕಾಪು, ಕಾರ್ಮಿಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕಟ್ಟಡ ಕಾರ್ಮಿಕರಿಗೆ ಉಚಿತ ನೋಂದಣಿ ಹಾಗೂ ಮಾಹಿತಿ ಕಾರ್ಯಾಗಾರವು ಜುಲೈ 25 ರ ಮಂಗಳವಾರ ಬೆಳಿಗ್ಗೆ 10 ರಿಂದ 12.30 ರ ವರೆಗೆ ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣ, ಬಿ.ಸಿ.ರೋಡ್ ನಲ್ಲಿ ನಡೆಯಲಿದೆ.

ಕಟ್ಟಡ ಕಾರ್ಮಿಕರ ನೋಂದಾವಣೆಗೆ ಅವಶ್ಯ ದಾಖಲೆಗಳಾದ ಆಧಾರ್, ಭಾವಚಿತ್ರ-1, ಉದ್ಯೋಗ ಪ್ರಮಾಣ ಪತ್ರ, ವೇತನ ಸ್ಲಿಪ್, ಬ್ಯಾಂಕ್

ಪಾಸ್ ಪುಸ್ತಕವನ್ನು ತರಬೇಕು ಎoದು ಸೀನಿಯರ್ ಛೇಂಬರ್ ಬಂಟ್ವಾಳ ಅಧ್ಯಕ್ಷರಾದ ಡಾ. ಆನಂದ ಬಂಜನ್ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment