Coastal Bulletin

ಬಂಟ್ವಾಳ: ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ನರಿಕೊಂಬು ಮತ್ತು ಶಂಭೂರು ಗ್ರಾಮಗಳು ಹರ್ ಘರ್ ಜಲ್ ಗ್ರಾಮಗಳಾಗಿ ಘೋಷಣೆಯಾಗಿದೆ. (ಪ್ರತಿ ಮನೆಗೂ ಕಾರ್ಯಾತ್ಮಕ ನಳ ಸಂಪರ್ಕ) ಜಲಜೀವನ್ ಮಿಷನ್ ಆಶಯದಂತೆ ಎಲ್ಲ ಮನೆಗಳಿಗೂ ನಲ್ಲಿ ಸಂಪರ್ಕ ಕಲ್ಪಿಸಲಾಗಿದ್ದು ಈಗ ಪಂಚಾಯತ್ ತನ್ನ ಗುರಿ ಮುಟ್ಟಿದೆ.

ಜು.14 ರಂದು ಗುರುವಾರ ನರಿಕೊಂಬು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹರ್ ಘರ್ ಜಲ್ ಗ್ರಾಮ ಘೋಷಣೆ ಕಾರ್ಯಕ್ರಮ ನಡೆಸಲಾಯಿತು. ಗ್ರಾ. ಪಂ ಅಧ್ಯಕ್ಷೆ ವಿನುತಾ ಪುರಷೋತ್ತಮ, ಉಪಾಧ್ಯಕ್ಷ ಪ್ರಕಾಶ್ ಮಡಿಮುಗೇರು, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಿವಗೊಂಡಪ್ಪ ಬಿರಾದರ್, ಪಂಚಾಯತ್ ಸದಸ್ಯರು, ಗ್ರಾಮಸ್ಥರು, ಫಲಾನುಭವಿಗಳ ಸಮ್ಮುಖದಲ್ಲಿ ನರಿಕೊಂಬು ಹಾಗೂ ಶಂಭೂರು ಗ್ರಾಮವನ್ನು ಹರ್ ಘರ್ ಜಲ್ ಗ್ರಾಮ ಎಂದು ಘೋಷಣೆ ಮಾಡಲಾಯಿತು.

ಗ್ರಾ.ಕು.ನೀ.ನೈ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜೆ.ಕೆ.ನಾಯ್ಕ್ ಅವರು ಮಾತನಾಡಿ

ಸ್ವಚ್ಛ ಮತ್ತು ಸುರಕ್ಷಿತ ನೀರು ಪ್ರತೀ ಮನೆಗೆ ತಲುಪಿದ್ದು ನೀರಿನ ಅಭಾವ ನೀಗಿಸುವಲ್ಲಿ ಜಲ ಜೀವನ್ ಮೀಷನ್ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಜೆಜೆಎಮ್ ಅನುಷ್ಠಾನ ಬೆಂಬಲ ಸಂಸ್ಥೆಯ ತಂಡದ ಜಿಲ್ಲಾ ಮುಖ್ಯಸ್ಥ ಶಿವರಾಮ, ಎಚ್‌ಆರ್‌ಡಿ ಚರಣ್‌ರಾಜ್, ಇಂಜಿನಿಯರ್ ಅಶ್ವಿನ್ ಯೋಜನೆಯ ಕಾರ್ಯ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು. ಗ್ರಾ.ಕು.ನೀ.ನೈ ಇಲಾಖೆಯ ಕಿರಿಯ ಅಭಿಯಂತರ ಕುಶ ಕುಮಾರ್ ಕಾಮಗಾರಿಗಳ ವಿವರ ನೀಡಿದರು. ಜೆಜೆಎಮ್ ಅನುಷ್ಠಾನ ಬೆಂಬಲ ಸಂಪನ್ಮೂಲ ಸಂಸ್ಥೆ ಗ್ರಾಮ್ಸ್ ನ ಸಿಬ್ಬಂದಿಗಳಾದ ಗುಣವತಿ ಹಾಗು ವಿಲ್ಮಾ ಉಪಸ್ಥಿತರಿದ್ದರು, ಪಂಚಾಯತಿಯ ಸಿಬ್ಬಂದಿಗಳು ಭಾಗವಹಿಸಿದ್ದರು.

Leave a Comment