ಬಂಟ್ವಾಳ :ಶ್ರೀ ಸಾಯಿ ಕಿಡ್ ಝೋನ್ ವಿದ್ಯಾಸಂಸ್ಥೆ ಬಿ ಸಿ ರೋಡ್ ಇಲ್ಲಿ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾ ಸಭೆಯು ಜೂ 14ರಂದು ಶನಿವಾರ ಶಾಲೆ ಯಲ್ಲಿ ನಡೆಯಿತು.
ಶ್ರೀಮತಿ ಜೆಸ್ಟಾಲಕ್ಷ್ಮಿ ಲೈಫ್ ಸ್ಕಿಲ್ ಟ್ರೈನರ್ ಮಂಗಳೂರು ಇವರು ಪೋಷಕರಿಗೆ ಉಪಯುಕ್ತ ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ 2024 ರ ಸಾಲಿನಲ್ಲಿ ಪೊಲೀಸ್ ಇಲಾಖೆಯಲ್ಲಿ ದಕ್ಷ,ಅಪ್ರತಿಮ ಹಾಗೂ ಅತ್ತ್ಯುತ್ತಮ ಸೇವೆ ಸಲ್ಲಿಸಿದ ಸಂಸ್ಥೆಯ ಪೋಷಕರಾದ ಸುಧೀರ್ ಕುಮಾರ್ ಜಾರಂದಗುಡ್ಡೆ ಸಿ ಎಚ್ ಸಿ ಸಿಟಿ ಕ್ರೈಂ ಬ್ರಾಂಚ್ ಮಂಗಳೂರು ನಗರ ಇವರಿಗೆ ಸನ್ಮಾನ್ಯ ಮುಖ್ಯಮಂತ್ರಿ ಗಳಾದ ಸಿದ್ಧರಾಮಯ್ಯ ರವರು ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿದ್ದು,ಇವರಿಗೆ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಐತಪ್ಪ ಪೂಜಾರಿ ,ಸಂಘದ ಅಧ್ಯಕ್ಷರಾದ ಜ್ಞಾನೇಶ್ ರಾವ್,ಉಪಾಧ್ಯಕ್ಷರಾದ ಶ್ರೀಮತಿ
ಸುಪ್ರೀತ, ಕೋಶಾಧ್ಯಕ್ಷ ರಾದ ದೇವೇಂದ್ರಪ್ಪ ,ಆಡಳಿತ ಮಂಡಳಿ ಯ ಸದಸ್ಯರಾದ ರಾಜೇಶ್ ಅಮೀನ್,ಶ್ರೀಮತಿ ಆರತಿ ಅಮೀನ್, ಸಮಿತಿ ಸದಸ್ಯರಾದ ಸುಂದರ್ , ಮಹೇಶ್, ಶೇಖರ್ ಮತ್ತು ಶಾಲಾ ಶಿಕ್ಷಕ ವರ್ಗ ದವರು , ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿಯರಾದ ಶ್ರೀಮತಿ ಪೂರ್ಣಿಮಾ ಶಾಲಾ ವರದಿ ವಾಚಿಸಿ, ಶ್ರೀಮತಿ ಚೈತ್ರ ವಂದಿಸಿ ಶ್ರೀಮತಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.ನಂತರ 2025-26 ನೇ ಸಾಲಿಗೆ ಅಧ್ಯಕ್ಷರಾಗಿ ಶ್ರೀಮತಿ ತೇಜಸ್ವಿನಿ ಪೂಜಾರಿ ಉಪಾಧ್ಯಕ್ಷರಾಗಿ ಸುಂದರ್ ,ಕೋಶಾಧ್ಯಕ್ಷ ರಾಗಿ ಶ್ರೀಮತಿ ಜಯಶ್ರೀ ಮತ್ತು 15 ಜನ ಪೋಷಕರನ್ನು ಕಾರ್ಯಕಾರಿ ಸಮಿತಿ ಗೆ ಆರಿಸಲಾಯಿತು.
,
















