ಬಂಟ್ವಾಳ: ಜೀರ್ಣೋದ್ಧಾರ ಹಂತದಲ್ಲಿರುವ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಕಾಷ್ಠಶಿಲ್ಪದ ಕಾಮಗಾರಿ ಆರಂಭಕ್ಕೆ ಎ. ೧೫ರಂದು ವಿಷು ಹಬ್ಬದ ಸಂದರ್ಭದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಚಾಲನೆ ನೀಡಲಾಯಿತು.
ಕ್ಷೇತ್ರದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದ್ದು, ಅರ್ಚಕ ಜಯರಾಮ ಕಾರಂತ ಸಹಕರಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಎಸ್.ಶೆಟ್ಟಿ ಸರಪಾಡಿ ಹಾಗೂ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಅವರ ನೇತೃತ್ವದಲ್ಲಿ ಕಾಷ್ಠಶಿಲ್ಪಿ ಹರೀಶ್ ಎಂ.ಸಿ.ಅವರಿಗೆ ಕಾಮಗಾರಿಯ ಆರಂಭ ವೀಳ್ಯವನ್ನು ಹಸ್ತಾಂತರಿಸಿದರು.
ಜೀರ್ಣೋದ್ಧಾರ ಆರ್ಥಿಕ ಸಮಿತಿ ಅಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ, ಕೋಶಾಧಿಕಾರಿv ಅರುಣ್ ಐತಾಳ್, ಆಡಳಿತ ಸಮಿತಿ ಅಧ್ಯಕ್ಷ ವಿಠಲ್ ಎಂ.ಆರುಮುಡಿ, ಕಾರ್ಯದರ್ಶಿ ಉಮೇಶ್ ಆಳ್ವ ಕೊಟ್ಟುಂಜ, ಸದಸ್ಯರಾದ ಗಿರಿಧರ್ ಮಠದಬೆಟ್ಟು, ಸುರೇಂದ್ರ ಪೈ ಸರಪಾಡಿ, ಪ್ರಮುಖರಾದ ಕುಸುಮಾಕರ ಶೆಟ್ಟಿ ಕುರ್ಯಾಳ, ರಾಧಾಕೃಷ್ಣ
ರೈ ಕೊಟ್ಟುಂಜ, ರಾಮಣ್ಣ ಶೆಟ್ಟಿ ಕಲ್ಕೊಟ್ಟೆ, ಸುಂದರ ಶೆಟ್ಟಿ ಹೊಳ್ಳರಗುತ್ತು, ಪದ್ಮಪ್ಪ ಪೂಜಾರಿ ಹೆಗ್ಗಡೆಕೋಡಿ, ದಿನೇಶ್ ಶೆಟ್ಟಿ ಬಜ, ಶಿವರಾಮ ಭಂಡಾರಿ, ರಾಧಾಕೃಷ್ಣ ಶೆಟ್ಟಿ ಕಲ್ಕೊಟ್ಟೆ, ಸಂತೋಷ್ ಶೆಟ್ಟಿ ಪಡ್ಡಾಯಿಬೆಟ್ಟು, ಪ್ರಕಾಶ್ಚಂದ್ರ ಆಳ್ವ ಪಡ್ಡಾಯಿಬೆಟ್ಟು, ಸತೀಶ್ ಪೈ ಸರಪಾಡಿ, ದಿನೇಶ್ ಗೌಡ ನೀರೊಲ್ಬೆ, ನಾರಾಯಣ ದೇವಾಡಿಗ, ಹರೀಶ್ ಮಠದಬೆಟ್ಟು, ಗಿರೀಶ್ ನಾಯ್ಕ್ ನೀರಪಲ್ಕೆ, ಮೋನಪ್ಪ ಪೂಜಾರಿ ಕಡವಿನಬಾಗಿಲು, ರಾಹುಲ್ ಕೋಟ್ಯಾನ್ ದರ್ಖಾಸು, ಚೇತನ್ ಬಜ, ಕಿಶನ್ ಸರಪಾಡಿ, ಯೋಗೀಶ್ ಗೌಡ ನೀರೊಲ್ಬೆ, ವಚನ್ ಬಜ, ರಾಘವ ಪೂಜಾರಿ ಕೊಟ್ಟುಂಜ, ಆನಂದ ದೇವಾಡಿಗ, ದಾಸಪ್ಪ ದೇವಾಡಿಗ, ಚಂದ್ರಶೇಖರ ನಾಯ್ಕ್ ಮೊದಲಾದವರಿದ್ದರು.













