ಬಂಟ್ವಾಳ: ರಿಕ್ಷಾ ಡ್ರೈವರ್ಸ್ ಅಸೋಸಿಯೇಷನ್ ಇದರ 48 ವಾರ್ಷಿಕ ಮಹಾಸಭೆಯು ಮಾ.12ರಂದು ಶನಿವಾರ ಬೆಳಿಗ್ಗೆ ಬಿ ಸಿ ರೋಡ್ ರಿಕ್ಷಾ ಭವನದಲ್ಲಿ ನಡೆಯಿತು.
ಡ್ರೈವರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ರಾಜೇಶ್ ಬೊಳ್ಳುಕಲ್ಲು ಸಭೆಯನ್ನು ಉದ್ಘಾಟಿಸಿ ಮಾತನಾಡಿ,ರಿಕ್ಷಾ ಡ್ರೈವರ್ಸ್ ಗಳ ಸಾಧನೆಯನ್ನು ಬನ್ನಿಸಿದರು ಸಮಾಜದಲ್ಲಿ ರಿಕ್ಷಾ ಡ್ರೈವರ್ಸ್ಗಳ ಕೊಡುಗೆ ಅಪಾರ, ಸಂಘದ ಅಭಿವೃದ್ದೀಯಲ್ಲಿ ಸದಸ್ಯರ ಶ್ರಮ ಮುಖ್ಯವಾದುದು ಎಂದರು
,ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಬಿ ಸಿ ರೋಡಿನ ಖ್ಯಾತ ವಕೀಲರದ ಹೇಮಚಂದ್ರ ರವರು ಮಾತನಾಡಿ, ರಿಕ್ಷಾ
ಚಾಲಕರಿಗೆ ಕಾನೂನಿನ ಬಗ್ಗೆ ಹರಿವು ಮೂಡಿಸಿದರು. ನಂತರ ಮಾತನಾಡಿದ ಸಂಘದ ಉಪಾಧ್ಯಕ್ಷರದ ಹುಸೈನ್ ಬಿ ರವರು ಸದಸ್ಯರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಪ್ರಕಾಶ್ ಹಾಗೂ ಖಜಾಂಜಿ ಕೃಷ್ಣಪ್ಪ ರವರು ಉಪಸ್ಥಿತರಿದ್ದರು. ಸಂಘದಲ್ಲಿ ದುಡಿದ ಹಿರಿಯ ರಿಕ್ಷಾ ಚಾಲಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಸ್ವಾಗತಿಸಿದರು, ಉಸ್ಮಾನರವರು ವಂದಿಸಿದರು.










