ಬಂಟ್ವಾಳ : ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಶ್ರೀ ರಾಜೀವ್ ಯುವಜನ ಸೇವಾ ಟ್ರಸ್ಟ್ (ರಿ.) ಬಾಯಿಲ ವೀರಕಂಭ ಇದರ 31ನೇ ವರ್ಷದ ವಾರ್ಷಿಕೋತ್ಸವ, ಸಾರ್ವಜನಿಕ ಶ್ರೀ ಲಕ್ಷ್ಮಿ ಸತ್ಯನಾರಾಯಣ ಪೂಜೆ ಹಾಗೂ 65 ಕೆಜಿ ವಿಭಾಗದ ಮುಕ್ತ ಕಬ್ಬಡಿ ಪಂದ್ಯಾಟ ಕಾರ್ಯಕ್ರಮವು ಜ.18ನೇ ಶನಿವಾರ ಸಂಘದ ಆವರಣದಲ್ಲಿ ಜರಗಲಿರುವುದು.
ಸಂಜೆ 6 ಗಂಟೆಗೆ ಸರಿಯಾಗಿ ಪಳನೀರು ಶ್ರೀ ಅನಂತ ಭಟ್ ರವರ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀ ಲಕ್ಷ್ಮಿ ಸತ್ಯನಾರಾಯಣ ಪೂಜೆ ನಡೆಯಲಿದ್ದು. ನಂತರ ಸರಸ್ವತಿ ಕಲಾ ನೃತ್ಯ ಕೇಂದ್ರ ಪಡುಬಿದ್ರಿ ಹಾಗೂ ಮಾಣಿ ನೆರಳಕಟ್ಟೆ ಕಲಾವಿದರಿಂದ ಶ್ರೀ ಕೊಲ್ಲೂರು ಮೂಕಾಂಬಿಕೆ ಮಹಿಮೆ ಯನ್ನು ಸಾರುವ "ಮಹಾಶಕ್ತಿ ಮಹಾಕಾಳಿ " ಹಾಗೂ ಶ್ರೀ ಕ್ಷೇತ್ರ ಅಯೋಧ್ಯೆಯ " ಶ್ರೀರಾಮ ನವಮಿ "
ವಿಭಿನ್ನ ಶೈಲಿಯ ನೃತ್ಯ ವೈಭವ ಜರಗಲಿರುವುದು. ಬಳಿಕ ಕಲಾರತ್ನ ಕಾಮಿಡಿ ಸ್ಟಾರ್ ಶಶಿ ಸಂಪ್ಯ ಪುತ್ತೂರು ಬಳಗದಿಂದ " ಕುಶಾಲ್ದ ಮಸಾಲೆ " ಕಾರ್ಯಕ್ರಮ, ಗಾಯತ್ರಿ ಮ್ಯೂಸಿಕಲ್ ದರ್ಬೆ ಪುತ್ತೂರು ಇವರಿಂದ "ಸಂಗೀತ ರಸ ಸಂಜೆ "ನಡೆಯಲಿರುವುದು.
ರಾತ್ರಿ ಗಂಟೆ 10 ರಿಂದ 65 ಕೆಜಿ ವಿಭಾಗದ ಹೊನಲು ಬೆಳಕಿನ "ಮುಕ್ತ ಕಬ್ಬಡಿ ಪಂದ್ಯಾಟ" ಜರಗಲಿರುವುದು ಎಂದು, ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.