ಮಂಗಳೂರು: ಶಿಕ್ಷಣದಲ್ಲಿ ನಾವಿನ್ಯತೆ ಮತ್ತು ಉದ್ಯಮಶೀಲತೆ ಕುರಿತಂತೆ ಬೊಧಕರ ಕೌಶಲ ಅಭಿವೃದ್ಧಿ ಕುರಿತ ಮೂರು ದಿನಗಳ "ಆಚಾರ್ಯ" ಕಾರ್ಯಾಗಾರ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜರಗಿತು.
ಅನಂತಪುರ ಶ್ರೀ ಕೃಷ್ಣದೇವರಾಯ ವಿವಿಯ ಆಟಲ್ ಇನ್ಕ್ಯುಬೇಶನ್ ಸೆಂಟರ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸಿ.ಚಂದ್ರ ಮೌಳಿ, ಬೆಂಗಳೂರು ಬಯೋ ಇನ್ನೋವೇಶನ್ ಸೆಂಟರ್ನ ಇನ್ಕ್ಯುಬೇಶನ್ ಆಪರೇಶನ್ ವಿಭಾಗ ಪ್ರಬಂಧಕಿ ಕು.ಶಹೀನ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.
ಕಾಲೇಜಿನ ಪ್ರಾಚಾರ್ಯ ಡಾ. ನಾಗೇಶ್ ಹೆಚ್. ಆರ್. ರಿಸರ್ಚ್ ಡೀನ್, ಇನ್ಕ್ಯುಬೇಶನ್ ಸೆಂಟರ್ನ ಮುಖ್ಯಸ್ಥ ಡಾ. ಉದಯ ಕುಮಾರ್ ಕೆ. ಶೆಣೈ, ಡೀನ್
ಎಕ್ರೆಡಿಟೇಶನ್ ಡಾ. ವೆಂಕಟೇಶ್ ಎನ್, ಉಪಸ್ಥಿತರಿದ್ದರು.
ಡಿಸೈನ್ ತಿಂಕಿಂಗ್, ಸ್ಟಾಟ್ ಅಪ್ ಇಕೋ ಸಿಸ್ಟಮ್, ಇನ್ಕ್ಯುಬೇಟರ್ ಮ್ಯಾನೇಜ್ ಮೆಂಟ್, ಉದ್ಯಮಶೀಲತಾ ವಿಧಾನಗಳ ಕುರಿತಂತೆ ಕಾರ್ಯಾಗಾರದಲ್ಲಿ ಒಳನೋಟಗಳ ಕುರಿತ ಚರ್ಚೆ, ಪ್ರಾಯೋಗಿಕ ಅನುಭವ, ಶೈಕ್ಷಣಿಕ ಇನ್ಕ್ಯುಬೇಶನ್ ಸೆಂಟರ್ ಗಳ ನಿರ್ವಹಣೆ ಕುರಿತ ವಿಷಯಗಳ ವಿಶ್ಲೇಷಣೆ, ಬೋಧಕರು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳನ್ನು ಸ್ಫೂರ್ತಿಯುತವಾಗಿ ಹೊಸತನದ ಸವಾಲುಗಳನ್ನೆದುರಿಸಿ ಅನ್ವೇಷಣಾ ಮನೋಭಾವದಿಂದ ಮುನ್ನಡೆಯುವ ಸವಾಲುಗಳ ಕುರಿತಂತೆ ಮಾರ್ಗದರ್ಶನ ನೀಡಲಾಯಿತು.