ಬಿ.ಸಿ.ರೋಡ್ : ಇನ್ನೂ ಲೋಕಾರ್ಪಣೆಯಾಗದೆ ಇರುವ ಮೂರು ವರ್ಷಗಳ ಹಿಂದೆ ನಿರ್ಮಾಣವಾದ ಹಿಂದೂ ರುದ್ರಭೂಮಿ ಈಗ ಪೊದೆಯೊಳಗೆ ಸೇರಿದೆ. ಇದೇನೂ ಕಾಮಗಾರಿಯಾಗದೇ, ಅನುದಾನ ಇಲ್ಲದೇ, ರಸ್ತೆ ಸಂಪರ್ಕ ಸರಿ ಇಲ್ಲದೇ, ಪೊದೆಯೊಳಗೆ ಸೇರಿಲ್ಲ. ರುದ್ರಭೂಮಿ ಲೋಕಾರ್ಪಣೆಗೆ ಸಿದ್ದವಾದ ಕೆಲವೇ ತಿಂಗಳಲ್ಲಿ ಚಿತಾಗಾರಕ್ಕೆ ಅಳವಡಿಸಿರುವ ಹೆಣವನ್ನು ಸುಡುವ ಎರಡೂ ಬದಿಯ ಕಬ್ಬಿಣ ಬಕೆಟ್‌ನ್ನೇ ಕಳ್ಳರು ಕದ್ದುಕೊಂಡು ಹೋಗಿರುವುದರಿಂದ ರುದ್ರ‘ಮಿಯೇ ನಿಷ್ಪ್ರಯೋಜಕವಾಗಿದೆ.
ಇದು ಬಂಟ್ವಾಳ ತಾಲೂಕಿನ ನಾವೂರು ಗ್ರಾಮದಲ್ಲಿರುವ ಸ್ಮಶಾನದ ಸ್ಥಿತಿ. ಕಳೆದ ಹಲವಾರು ವರ್ಷಗಳಿಂದ ಸರಕಾರಿ ‘ಮಿ ೮೦ ಸೆಂಟ್ಸ್ ಜಾಗದಲ್ಲಿ ನಾವೂರ ಪಂಚಾಯತ್ ಹಿಂದೂ ರುದ್ರಭೂಮಿಯನ್ನು ಮೀಸಲಿಟ್ಟಿದ್ದು, ಮೂರು ವರ್ಷಗಳ ಹಿಂದೆ ರುದ್ರಭೂಮಿಯ ಕಾಮಗಾರಿ ಸಿದ್ಧತೆ ನಡೆಸಿದ್ದು, ಇದಕ್ಕೆ ಸಹಕಾರಿಯಾಗಿ ‘ರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪಂಚಾಯತ್‌ನ ಎನ್‌ಆರ್‌ಇಜಿ ಸ್ಕೀಮ್‌ನಿಂದ ಮತ್ತು ಸ್ವಂತ ನಿಯಿಂದ ಸ್ಮಶಾನ ನಿರ್ಮಾಣ ಮಾಡಿತ್ತು. ಇದರಲ್ಲಿ ಒಂದು ಹೆಣ ಸುಡುವ ಚಿತಾಗಾರ, ಕಟ್ಟಿಗೆ ಶೇಖರಣೆ ಇಡುವ ಆರ್‌ಸಿಸಿ ಕಟ್ಟಡ, ಹೀಗೆ ಎಲ್ಲಾ ಅಗತ್ಯ ಕಾಮಗಾರಿಯಾಗಿರುತ್ತದೆ. ಕೇವಲ ವಿದ್ಯುತ್ ಮತ್ತು ನೀರಿನ ಸಂಪರ್ಕ ಬಾಕಿಯಾಗಿದ್ದು, ಅದನ್ನು ಮಾಡುವ ಹಂತದಲ್ಲಿದ್ದು ಕಾಮಗಾರಿ ಸಂಪೂರ್ಣವಾಗಿ ನಾಲ್ಕು ತಿಂಗಳು ಆಗುವಾಗಲೇ ಸ್ಮಶಾನದಲ್ಲಿ ಹೆಣ ಸುಡುವ ಕಬ್ಬಿಣದ ಚಿತಾಗಾರದ ಎರಡು ಕಬ್ಬಿಣ ಬಕೆಟನ್ನೇ ಕಳ್ಳರು ಕದ್ದೊಯ್ದಿದ್ದಾರೆ. ಸಂಬಂ‘ಪಟ್ಟ ಇಲಾಖೆಗೆ ತಿಳಿಸಿದರೂ ಏನೂ ಪ್ರಯೋಜನವಾಗಲಿಲ್ಲ.
ನಾವೂರು ಸ್ಮಶಾನವನ್ನು ಬಂಟ್ವಾಳ - ಸರಪಾಡಿ ರಸ್ತೆಯಲ್ಲಿ ಮಣಿಹಳ್ಳ ಜಂಕ್ಷನ್‌ನಿಂದ ಕೆಲವೇ ದೂರದಲ್ಲಿ ನಿರ್ಮಿಸಲಾಗಿತ್ತು. ೮೦ ಸೆಂಟ್ಸ್ ವಿಸ್ತೀರ್ಣದ ಜಾಗದಲ್ಲಿ ಒಂದು ಬದಿಯಲ್ಲಿ ನೇತ್ರಾವತಿ ನದಿ ಮತ್ತೊಂದು ಬದಿ ರಸ್ತೆಯ ಸಮೀಪವೇ ನಾವೂರು ವಿಷ್ಣುಮೂರ್ತಿ ದೇವಸ್ಥಾನ ಇರುತ್ತದೆ. ಹಳೆಗೇಟು, ಮಲೆಬಾವ್, ಕೀಲ್ತೋಡಿ, ಕೊಪ್ಪಲ, ಕನಪಾದೆ, ಅಜಂಕೋಡಿ, ನಾವೂರ ಬೀದಿ, ಮೆ‘ಂದಾಲ, ಪಕಲಬೆಟ್ಟು, ನಾವೂರ ಅದರ್ಗಳ, ಸಜಂಕಬೆಟ್ಟು ಈ ‘ಗದ ಗ್ರಾಮಸ್ಥರಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ನಿರ್ಮಾಣ ಮಾಡಿದ್ದರೂ ಈಗ ಉಪಯೋಗಕ್ಕೆ ಬಾರದಂತಾಗಿರುವುದು ವಿಪರ್ಯಾಸವೇ ಸರಿ.
ಸ್ಮಶಾನವು ವ್ಯವಸ್ಥಿತವಾಗಿರಬೇಕಾಗಿದ್ದ ಈ ಪ್ರದೇಶದಲ್ಲಿ ಸ್ಮಶಾನದ ಸುತ್ತ ಒಂದು ಬದಿಯಲ್ಲಿ ಕಸಗಳ ರಾಶಿ, ಮಣ್ಣಿನ ರಾಶಿ, ಮತ್ತೊಂದು ಬದಿಯಲ್ಲಿ ಅಡಿಕೆ
ಸಸಿಗಿಡಗಳನ್ನು ನೆಟ್ಟಿರುವುದು, ಮಾತ್ರವಲ್ಲದೇ ಇನ್ನೊಂದು ಕಡೆ ಬೃಹತ್ ಪೊದೆಗಳು ತುಂಬಿದೆ. ಹೀಗೆ ಸರಕಾರದಿಂದ ಹಿಂದೂ ರುದ್ರಭೂಮಿಗೆ ನಿಗದಿಯಾಗಿದ್ದ ಜಾಗದಲ್ಲಿ ಅತಿಕ್ರಮಣದ ಭೀತಿಯೂ ಎದ್ದು ಕಾಣುತ್ತಿದೆ. ಈ ಸ್ಮಶಾನವನ್ನು ಸುವ್ಯವ್ಯವಸ್ಥಿತವಾಗಿ ನಿರ್ಮಾಣ ಮಾಡಿದರೆ ಈ ‘ಗದವರು ಅಂತ್ಯಕ್ರಿಯೆಗಾಗಿ ಬಂಟ್ವಾಳದಲ್ಲಿರುವ ಸ್ಮಶಾನವನ್ನು ಅವಲಂಬಿಸುವುದು ಕಡಿಮೆಯಾಗುತ್ತದೆ. ಇದರಿಂದ ಬಂಟ್ವಾಳದಲ್ಲಿ ಒತ್ತಡ ಕಡಿಮೆಯಾಗುತ್ತದೆ. ಈ ಬಗ್ಗೆ ಆದಷ್ಟು ಸಂಬಂ‘ಪಟ್ಟ ಇಲಾಖೆ ಗಮನ ಹರಿಸಿ ವ್ಯವಸ್ಥೆಯನ್ನು ಸರಿಪಡಿಸುವ ಅಗತ್ಯವಿದೆ.
ನಾವೂರದಲ್ಲಿ ಹಲವಾರು ವರ್ಷಗಳ ಹಿಂದೆ ಸರಕಾರದಿಂದ ನೇತ್ರಾವತಿ ನದಿ ಬದಿಯಲ್ಲೇ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಸ್ಥಳ ಮಂಜೂರಾಗಿರುತ್ತದೆ. ಈ ‘ಗದಲ್ಲಿ ರುದ್ರಭೂಮಿಯ ಅಗತ್ಯವೂ ಇರುತ್ತದೆ. ನಿರ್ಮಾಣ ಮಾಡಿರುವ ಸ್ಮಶಾನ ಈಗ ದುಸ್ಥಿತಿಯಲ್ಲಿದ್ದು, ಈ ಭಾಗದ ಗ್ರಾಮಸ್ಥರು ಬಂಟ್ವಾಳದ ಬಡ್ಡಕಟ್ಟೆಯಲ್ಲಿರುವ ಸ್ಮಶಾನವನ್ನೇ ಅವಲಂಬಿಸಬೇಕಾಗಿರುತ್ತದೆ. ಸ್ಮಶಾನದಲ್ಲಿ ಹೆಣ ಸುಡಲು ಅಳವಡಿಸಿರುವ ಕಬ್ಬಿಣ ಬಕೆಟ್ ಕಳವಾಗಿರುತ್ತದೆ. ಈ ಬಗ್ಗೆ ಸಂಬಂ‘ಪಟ್ಟ ಇಲಾಖೆಗೆ ತಿಳಿಸಿದರೂ ಏನೂ ಪ್ರಯೋಜನವಾಗಿಲ್ಲ.
- ಸದಾನಂದ ಗೌಡ ನಾವೂರ, ಅದ್ಯಕ್ಷರು, ನಾವೂರು ಸ್ಮಶಾನ ನಿರ್ವಹಣಾ ಸಮಿತಿ
********
ನಾವೂರದಲ್ಲಿ ಸರಕಾರದಿಂದ ೮೦ ಸೆಂಟ್ಸ್ ‘ಮಿ ಹಿಂದು ರುದ್ರಭೂಮಿಯ ರಚನೆಗಾಗಿ ಗುರುತಿಸಿದ್ದು, ಕಳೆದ ಮೂರು ವರ್ಷಗಳ ಹಿಂದೆ ಚಿತಾಗಾರದ ಕೆಲಸವೂ ಆಗಿರುತ್ತದೆ. ಆದರೆ ಚಿತಾಗಾರದ ಕಬ್ಬಿಣದ ಬಕೆಟನ್ನೇ ಕಳ್ಳರು ಕದ್ದೊಯ್ದಿದ್ದಾರೆ. ನಂತರ ಈ ಸ್ಥಿತಿಗೆ ಬಂದಿದೆ. ಮುಂದಿನ ದಿನಗಳಲ್ಲಿ ರುದ್ರ‘ಮಿಗೆ ಬೇಕಾಗುವ ಎಲ್ಲಾ ವ್ಯವಸ್ಥೆ, ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ, ರಸ್ತೆ ವ್ಯವಸ್ಥೆ, ಭದ್ರತೆಗಾಗಿ ಸುತ್ತಲೂ ಕಂಪೌಂಡ್ ನಿರ್ಮಿಸಿ, ಸಿಸಿ ಕ್ಯಾಮರಾ ಅಳವಡಿಸಿ, ಗೇಟ್ ಅಳವಡಿಸಿ ಲೋಕಾರ್ಪಣೆ ನಡೆಸಲಾಗುವುದು.
- ಜನಾರ್ದನ ಕೊಂಬೆಟ್ಟು, ಸದಸ್ಯರು ನಾವೂರು ಗ್ರಾಮ ಪಂಚಾಯತ್