ಬಂಟ್ವಾಳ :ರಾರಾಸಂ ಸಂಸ್ಥೆಯ ಕಲೆ ಸಾಹಿತ್ಯ ಸಾಂಸ್ಕೃತಿಕ ಶೈಕ್ಷಣಿಕ ಪ್ರೋತ್ಸಾಹದ ಸಾಂಸ್ಕೃತಿಕ ಕಲರವ ಕಾರ್ಯಕ್ರಮ "ರಾರಾಸಂಭ್ರಮ-24"ವು ಬಹಳ ಯಶಸ್ವಿಯಾಗಿ ಲಯನ್ಸ್ ಸೇವಾ ಮಂದಿರದಲ್ಲಿ ಇತ್ತೀಚಿಗೆ ನೆರವೇರಿತು.
ವರ್ತಕರ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರು, ಸಂಘ ಸಂಸ್ಥೆಗಳ ಪ್ರೋತ್ಸಾಹಕರಾದ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳ ಪ್ರತಿಭೆಗೆ ಒಳ್ಳೇ ವೇದಿಕೆ ನೀಡುವ ಸಂಸ್ಥೆಯ ಕಾರ್ಯ ಶ್ಲಾಘನೀಯ. ರಾರಾಸಂ ಸಂಸ್ಥೆ ನಡೆಸುವ ಈ ಪ್ರತಿಭಾನ್ವೇಷಣಾ ಕಾರ್ಯಕ್ರಮವನ್ನು 14ವರ್ಷಗಳಿಂದ ನೆಡೆಸುತ್ತಿರುವುದು ನಿಜಕ್ಕೂ ಪ್ರಶಂಸನೀಯ. ಇಂತಹ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಬಂದಾಗ ಸಂಸ್ಥೆ ಇನ್ನಷ್ಟು ಬೆಳೆಯಲು ಸಾಧ್ಯ ಎಂದು ಶುಭ ಹಾರೈಸಿದರು.
ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕರಾದ ದಿವ್ಯಾ ವಿ ಶೆಟ್ಟಿ ,ಸುರಿಬೈಲ್ ಹಿ ಪ್ರಾ ಶಾಲೆಯ ಮುಖ್ಯ ಶಿಕ್ಷಕ ಗೋಪಾಲ S, ಪತ್ರಕರ್ತ ಹರೀಶ್ ಮಾಂಬಾಡಿ, ಜೆಸಿಐ ಬಂಟ್ವಾಳ ಅಧ್ಯಕ್ಷರಾದ ಗಣೇಶ್ ಕೆ ಕುಲಾಲ್ ಮುಂತಾದವರು ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ನಂತರ ನಿರಂತರವಾಗಿ ವಿವಿಧ ವಯೋಮಾನಕ್ಕೆ ಅನುಗುಣವಾಗಿ ಬೇರೆ ಬೇರೆ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಅದೃಷ್ಟ ಸ್ಪರ್ಧೆ, ಪುಟಾಣಿ ಪಂಟರ್ , ಕವನ ಸ್ಪರ್ಧೆ , ರಂಗೋಲಿ ಸ್ಪರ್ಧೆ, ಫೋಟೋ ಫ್ರೇಮ್ ಸ್ಪರ್ಧೆ, ಚಿತ್ರ ಕಲಾ ಸ್ಪರ್ಧೆ, ಭಾಷಣ ಸ್ಪರ್ಧೆ, ವೈಯುಕ್ತಿಕ ಛದ್ಮವೇಷ ಸ್ಪರ್ಧೆ, ಸೂಪರ್ ಸಿಂಗರ್, ಡಾನ್ಸ್ ಜೂನಿಯರ್ಸ್ ಹಾಗೂ ಸಮೂಹ ನೃತ್ಯ ಸ್ಪರ್ಧೆ ಮುಂತಾದವುಗಳು ಬಹಳ ಆಕರ್ಷಕವಾಗಿ ಮೂಡಿ ಬಂತು. ನೂರಾರು ಸ್ಪರ್ಧಾಳುಗಳು, ಹಿತೈಷಿಗಳು ಕಾರ್ಯಕ್ರಮದಲ್ಲಿ ಬಾಗವಹಿಸಿ ಸಾಂಸ್ಕೃತಿಕ ಕಲರವದ
ಸೊಭಗು ಹೆಚ್ಚಿಸಿದರು.
ಸಮಾರೋಪ ಸಮಾರಂಭದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಮಾಡಿದ ಪ್ರತಿಭಾನ್ವಿತ ಬಾಲಕ ಮಾ. ಅನ್ವೇಶ್ ಅಂಬೆಕಲ್ಲು ಇವನಿಗೆ "ರಾರಾಸಂ ಪುರಸ್ಕಾರ-24" ನೀಡಿ ಗೌರವಿಸಲಾಯಿತು. ಇತ್ತೀಚಿಗೆ ರಾಜ್ಯೋತ್ಸವ ಪುರಸ್ಕಾರ ಪಡೆದ ಸದಾಶಿವ ಡಿ ತುಂಬೆ ಇವರಿಗೂ ಗೌರವಾಭಿನಂದನೆ ಸಲ್ಲಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಲಯನ್ ಜಯರಾಜ್ ಪ್ರಕಾಶ್ ಇವರು ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಪೂರ್ವ ಪ್ರಾಂತೀಯ ಅಧ್ಯಕ್ಷರಾದ ರಾಮಾನಂದ ನೂಜಿಪ್ಪಾಡಿ, ಜೆಸಿಐ ಮಡಂತ್ಯಾರು ಅಧ್ಯಕ್ಷೆಯಾದ ಅಮಿತ ಅಶೋಕ್ , ಹೋಟೆಲ್ ಸಾಯಿಲೀಲಾ ಮಾಲಕರಾದ ಸದಾನಂದ ಬಂಗೇರ,ನಿವೃತ್ತ ಶಿಕ್ಷಕ ಬಿ ರಾಮಚಂದ್ರ ರಾವ್, ಚಿತ್ರಕಲಾ ಶಿಕ್ಷಕರಾದ ಚೆನ್ನಕೇಶವ ಮಾಸ್ತೆರ್,ಮುರಳಿಕೃಷ್ಣ ರಾವ್, ಬಜಾರ್ ಸಂಸ್ಥೆಯ ಸುಧಾಕರ್ ಆಚಾರ್ಯ, ಹರೀಶ್ ಮಂಗಳೂರು ಇವರುಗಳು ಅತಿಥಿಗಳಾಗಿ ಬಾಗವಹಿಸಿ ಕಾರ್ಯಕ್ರಮದ ಮೆಚ್ಚುಗೆ ವ್ಯಕ್ತ ಪಡಿಸಿದರು. ಕೇಶವ ಮಾಸ್ಟರ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.
ನಿರ್ದೇಶಕರಾದ ದಿವ್ಯರಾಣಿ, ತುಳಸೀದಾಸ್ ಪೈ, ಶೋಭಾ ಈಶ್ವರ್, ಹಿತೈಷಿಗಳಾದ ಜಲಜಾಕ್ಷಿ ಕುಲಾಲ್ ಪಾಣೆಮಂಗಳೂರು, ದಾಮೋದರ್ ಬಿ ಎಂ, ರಾಘವೇಂದ್ರ ಕಾರಂತ್, ಅನ್ವೇಸ್ ಹೆತ್ತವರಾದ ಮಧುಸೂಧನ ಮತ್ತು ತೇಜಸ್ವಿ ಮಧುಸೂದನ್ ಮುಂತಾದವರು ಉಪಸ್ಥಿತರಿದ್ದರು. ಅಧ್ಯಕ್ಷರಾದ ರಾಧಾಕೃಷ್ಣ ಬಂಟ್ವಾಳ ಸ್ವಾಗತಿಸಿದರು. ದಾಮೋದರ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿ, ನಾಗೇಶ್ ಬಾಳೆಹಿತ್ಲು ಧನ್ಯವಾದ ಸಮರ್ಪಿಸಿದರು.