breaking news
  ರಾಜ್ಯಾದ್ಯಂತ ಹೆಣ್ಣು ಮಕ್ಕಳ ಸರಣಿ ಕೊಲೆಗಳು,ಅನುಮಾನಸ್ಪದ ಸಾವುಗಳು,ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ- ಕಾಂಗ್ರೆಸ್ ಸರಕಾರದ ವಿರುದ್ಧ ಬಿವೈ ವಿಜಯೇಂದ್ರ ಆಕ್ರೋಶ.|   Natural Ice Cream ಮಾಲಿಕ'ಐಸ್‌ಕ್ರೀಂ ಮ್ಯಾನ್‌ ' ಖ್ಯಾತಿಯ ರಘುನಂದನ್ ಶ್ರೀನಿವಾಸ್ ಕಾಮತ್ ನಿಧನ.|   ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ - ಡಿಕೆಶಿ ನನಗೆ 100 ಕೋಟಿ ಆಫರ್ ಮಾಡಿದ್ರು, ದೇವರಾಜೇ ಗೌಡ ಗಂಭೀರ ಆರೋಪ.|   ಐಸಿಸ್ ನಂಟು ಹೊಂದಿರುವ ಆರೋಪ ಉಳ್ಳಾಲದ ಮಾಜಿ ಶಾಸಕ ದಿ. ಇದಿನಬ್ಬರ ಮೊಮ್ಮಗನಿಗೆ ಜಾಮೀನು.|   ಮಗುವನ್ನು ಕಾರಿನಲ್ಲೇ ಮರೆತು ಮದುವೆಗೆ ಹೋದ ದಂಪತಿ, ಉಸಿರುಗಟ್ಟಿ ಸಾವು.|   ಕೇರಳದಲ್ಲಿ ಹೆಪಟೈಟಿಸ್ ಎ ಪ್ರಕರಣಗಳ ಏರಿಕೆ ಹಿನ್ನೆಲೆ, 4 ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದ ಆರೋಗ್ಯ ಇಲಾಖೆ.|   CAA ಅಡಿಯಲ್ಲಿ ಮೊದಲ ಬಾರಿಗೆ 14 ಜನರಿಗೆ ಭಾರತೀಯ ಪೌರತ್ವ ನೀಡಿದ ಕೇಂದ್ರ ಸರಕಾರ.|

ಬಂಟ್ವಾಳ :ಲಯನ್ಸ್ ಪ್ರಾಂತೀಯ ಸಮ್ಮಿಲನ ಸಮಿತಿ ಅಧ್ಯಕ್ಷರಾಗಿ ದಾಮೋದರ ಬಿ.ಎಂ. ಆಯ್ಕೆ

Coastal Bulletin
ಬಂಟ್ವಾಳ :ಲಯನ್ಸ್ ಪ್ರಾಂತೀಯ ಸಮ್ಮಿಲನ ಸಮಿತಿ ಅಧ್ಯಕ್ಷರಾಗಿ ದಾಮೋದರ ಬಿ.ಎಂ. ಆಯ್ಕೆ

ಬಂಟ್ವಾಳ: ಲಯನ್ಸ್ ಜಿಲ್ಲೆ ೩೧೭ಡಿ ಯ ಪ್ರಾಂತ್ಯ ೫ರ ಪ್ರಾಂತೀಯ ಸಮ್ಮಿಲನ ನಡೆಸುವ ಹಾಗೂ ಪ್ರಾಂತೀಯ ಸಮ್ಮಿಲನ ಸಮಿತಿ ರಚಿಸುವ ಬಗ್ಗೆ ಪೂರ್ವಭಾವಿ ಸಭೆ ಮಂಗಳವಾರ ಮಂಚಿ ಲಯನ್ಸ್ ಸೇವಾ ಮಂದಿರದಲ್ಲಿ ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಾಂತೀಯ ಸಮ್ಮಿಲನ ಸಮಿತಿ ಅಧ್ಯಕ್ಷರಾಗಿ ದಾಮೋದರ ಬಿ.ಎಂ. ಮಾರ್ನಬೈಲು ಆಯ್ಕೆಗೊಂಡರು. ಕಾರ್ಯದರ್ಶಿಯಾಗಿ ಜಯಪ್ರಕಾಶ್ ರೈ ಮೇರಾವು, ಕೋಶಾಧಿಕಾರಿಯಾಗಿ ರಾಮ್‌ಪ್ರಸಾದ್ ರೈ, ಗೌರವ ಮಾರ್ಗದರ್ಶಕರಾಗಿ ವಸಂತ ಕುಮಾರ್ ಶೆಟ್ಟಿ, ಕೆ. ದೇವದಾಸ ಭಂಡಾರಿ, ಗೌರವ ಅಧ್ಯಕ್ಷರಾಗಿ ಡಾ| ಗೋಪಾಲ ಆಚಾರ್ ಮಂಚಿ, ಗೌರವ ಸಲಹೆಗಾರರಾಗಿ ವಿಠಲ ಕುಮಾರ್ ಶೆಟ್ಟಿ, ಮನೋರಂಜನ್ ಕೆ. ಆರ್. ಮತ್ತಿತರರನ್ನು ಆಯ್ಕೆ ಮಾಡಲಾಯಿತು.

ಫೆ. ೧೧ ಆದಿತ್ಯವಾರ ನಡೆಯಲಿರುವ ಪ್ರಾಂತೀಯ ಸಮ್ಮಿಲನವು ವಿವಿಧ ಸೇವಾ ಕಾರ್ಯಕ್ರಮಗಳ ಸಹಿತವಾಗಿ ಪ್ರಾಂತ್ಯದ ಎಲ್ಲಾ ೧೦ ಕ್ಲಬ್‌ಗಳ ಸಂಪೂರ್ಣ ತೊಡಗಿಸುವಿಕೆ ಮೂಲಕ ಯಶಸ್ವಿಯಾಗಿ ನೆರವೇರಬೇಕೆಂದು ಲಯನ್ಸ್ ಜಿಲ್ಲೆಯ ನಾಯಕರು, ಪೂರ್ವ ಪ್ರಾಂತೀಯ ಅಧ್ಯಕ್ಷರುಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಆತಿಥೇಯ ಸಂಸ್ಥೆ ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಇದರ ಅಧ್ಯಕ್ಷರಾದ ರಮಾ ಜಿ. ಆಚಾರ್ ಸ್ವಾಗತಿಸಿದರು. ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿಯವರು ಪ್ರಸ್ತಾವನೆ ನೀಡಿದರು. ದಾಮೋದರ ಬಿ.ಎಂ. ಸಮಿತಿಗಳ ರೂಪುರೇಷೆಗಳ ಬಗ್ಗೆ ವಿವರಿಸಿದರು. ಪೂರ್ವ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ ಮಾರ್ಗದರ್ಶನ ಮಾಡಿದರು. ಪ್ರಾಂತೀಯ ಸಂಯೋಜಕ ವಿಜಯ ರೈ, ವಲಯಾಧ್ಯಕ್ಷ ಎವುಜಿನ್ ಲೋಬೊ, ಡೊನಾಲ್ಡ್ ಬಂಟ್ವಾಳ್, ವಲಯ ಸಂಯೋಜಕ ಸತೀಶ್ ಭಂಡಾರಿ, ಕ್ಲಬ್ ಕಾರ್ಯದರ್ಶಿ ಶರ್ಮಿಳಾ ವಿ. ಶೆಟ್ಟಿ, ಕೋಶಾಧಿಕಾರಿ ರಾಜಲಕ್ಷ್ಮೀ ಮನೋರಂಜನ್, ಕ್ಲಬ್ ಅಧ್ಯಕ್ಷರುಗಳಾದ ಆದರ್ಶ್ ಕೆ.ಎನ್., ಫೆಲಿಕ್ಸ್ ಲೋಬೊ, ಅರುಣ್ ಡಿಸೋಜ, ಜಯರಾಮ ಬಳ್ಳಾಲ್, ಚಂದ್ರಶೇಖರ ಶೆಟ್ಟಿ, ಜಗದೀಶ್ ಕೊಲ, ನೋವೆಲ್ ಲೋಬೊ ಮತ್ತಿತರರು ಉಪಸ್ಥಿತರಿದ್ದರು. ಜಯಪ್ರಕಾಶ್ ರೈ ಮೇರಾವು ವಂದಿಸಿದರು. ರಾಮ್‌ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.

Leave a Comment