ಬಂಟ್ವಾಳ : ಸಂತ ಡೊಮಿನಿಕ್ ಆಂಗ್ಲ ಮಾಧ್ಯಮ ಶಾಲೆ ಮರಿಯಾಶ್ರಮ ಬಡಕಬೈಲ್,( ಅಸೋಸಿಯೇಷನ್ ಆಫ್ ಐ ಸಿ ಎಸ್ ಸಿ ಅಂಡ್ ಸಿ ಬಿ ಎಸ್ ಸಿ ಸ್ಕೂಲ್ ) ಇಲ್ಲಿ ಅಂತರ್ ಶಾಲಾ ಥ್ರೊಬಾಲ್ ಪಂದ್ಯಾಟ ಸ್ಪರ್ಧೆಯು ಡಿ 13ರಂದು ಮಂಗಳವಾರ ಶಾಲಾ ಮೈದಾನದಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮವನ್ನು ಪೂರ್ವಾಹ್ನ ಶಾಲಾ ಆವರಣದಲ್ಲಿ ಲಿಲ್ಲಿ ಪಾಯ್ಸ್ ಜಿಲ್ಲಾಧ್ಯಕ್ಷರು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಜಿಲ್ಲೆ ಇವರು ದೀಪ ಬೆಳಗಿಸುವ ಮೂಲಕಪಂದ್ಯಾಟವನ್ನು ಉದ್ಘಾಟಿಸಿದರು. ಶಾಲಾ ಪ್ರಾಂಶುಪಾಲರಾದ ಫಾದರ್ ಫ್ರಾನ್ಸಿಸ್ ಅರುಣ್ ಡಿಸೋಜಾ, ಸಂಚಾಲಕರಾದ ಫಾದರ್ ರೆಜಿನಾಲ್ಡ್ ಡಿ ಮೇಲ್ಲೊ ಆಡಳಿತಾಧಿಕಾರಿ ಫಾದರ್ ಸುನಿಲ್ ಕ್ರಿಸ್ಟೋಫರ್ ಡಿಸೋಜಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ಪಂದ್ಯಾಟದಲ್ಲಿ ಒಟ್ಟು 16 ತಂಡಗಳು ಪಾಲ್ಗೊಂಡಿದ್ದು ಕೆನರಾ ಹೈಸ್ಕೂಲ್, ಮಂಗಳೂರು ಈ ತಂಡವು ವಿಜೇತ ತಂಡವಾಗಿ ಹೊರಹೊಮ್ಮಿದ್ದು , ರನ್ನರ್ಸ್ ಆಗಿ ಸಂತ ಡೊಮಿನಿಕ್ಸ್ ಆಂಗ್ಲ
ಮಾಧ್ಯಮ ಶಾಲೆ ವಿಜಯಿಯಾಗಿದೆ.
ವಿಜೇತರನ್ನು ಜೂಲಿ ಟಿ.ಜೆ ಪ್ರಾಂಶುಪಾಲರು ಬಿ ಆರ್ ಎಂ ಪಿ ಸೆಂಟ್ರಲ್ ಸ್ಕೂಲ್ ಬಂಟ್ವಾಳ ಪುರಸ್ಕರಿಸಿದರು. ಕಾರ್ಯಕ್ರಮದಲ್ಲಿ ಲಿಲ್ಲಿ ಪಾಯ್ಸ್ ಇವರನ್ನು ಸಂತ ಡೊಮಿನಿಕ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯು ಅಭಿನಂದಿಸಿದ್ದು,ಶಾಲಾ ಸಂಚಾಲಕ ರೆಜಿನಾಲ್ಡ್ ಡಿ ಮೇಲ್ಲೊರವರು ವಿಜೇತರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಕುಮಾರಿ ಹೆನ್ಸಿಟ ಸ್ವಾಗತಿಸಿ, ಶ್ವೇತಾ ವಂದಿಸಿದರು. ಜೆನಿಫರ್ ಪಿಂಟೋ ಹಾಗೂ ವಿದ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು ಕಾರ್ಯಕ್ರಮಕ್ಕೆ ಶಿಕ್ಷಕ ವೃಂದದವರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ರಾಷ್ಟ್ರಗೀತೆ ಯೊಂದಿಗೆ ಮುಕ್ತಾಯಗೊಳಿಸಲಾಯಿತು.















