ಮಂಗಳೂರು :ಸ್ಟಾರ್ಟ್-ಅಪ್ ಮೈಂಡ್-ಸೆಟ್' ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳ ಮಹತ್ವಾಕಾಂಕ್ಷಿ ಉದ್ಯಮಿ ವಿದ್ಯಾರ್ಥಿಗಳಿಗೆ 4 ದಿನಗಳ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮ ಡಿ.19ರಿಂದ 22, 2022 ರ ವರೆಗೆ, 'ವರ್ಟೆಕ್ಸ್ ಒನ್', ಬಲ್ಲಾಳ್ ಭಾಗ್, ಮಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ಡಾ. ರಾಘವೇಂದ್ರ ಹೊಳ್ಳ ,ಅಧ್ಯಕ್ಷರು ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಇವರು ಕೋಸ್ಟಲ್ ಬುಲೆಟಿನ್ ಗೆ ತಿಳಿಸಿದರು.
ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಒಂದು ನವೀನ ಪ್ರತಿಭಾನ್ವೇಷಣೆ ಶೈಕ್ಷಣಿಕ ಕಲ್ಪನೆಯಾಗಿದ್ದು ಅದು ವಾಣಿಜ್ಯ, ಸಮಾಜ ಕಾರ್ಯ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ ಪದವಿಪೂರ್ವ ಕಾರ್ಯಕ್ರಮಗಳನ್ನು ನೀಡುತ್ತದೆ. “EARN WHLE LEARN” ಎಂಬ ತತ್ವವನ್ನು ಅನುಸರಿಸುವ ಮೂಲಕ ಸೈದ್ಧಾಂತಿಕ ಜ್ಞಾನ ಮತ್ತು ಪ್ರಾಯೋಗಿಕತೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಈ ಸಂಸ್ಥೆಯ ಮುಖ್ಯ ದೃಷ್ಟಿಯಾಗಿದೆ. ಈ ರೀತಿ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನ ಆಯ್ಕೆ ಮಾಡುವಲ್ಲಿ ಉತ್ತೇಜಿಸುತ್ತದೆ. ನಮ್ಮ ಸಂಸ್ಥೆಯು, ಅಟಲ್ ಇನ್ಕ್ಯುಬೇಶನ್ ಸೆಂಟರ್[AIC], NITTE, ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್, ಮಂಗಳೂರು ಮತ್ತು ರೋಟರಿ ಮಂಗಳೂರು ಡೌನ್ ಟೌನ್ ಸಹಯೋಗದಲ್ಲಿ, ವಿವಿಧ ಕ್ಷೇತ್ರಗಳ ಮಹತ್ವಾಕಾಂಕ್ಷಿ
ಉದ್ಯಮಿ ವಿದ್ಯಾರ್ಥಿಗಳಿಗೆ 'ಸ್ಟಾರ್ಟ್ ಅಪ್ ಮೈಂಡ್ ಸೆಟ್' ಎಂಬ ನಾಲ್ಕು ದಿನಗಳ ಉದ್ಯಮಶೀಲತಾ ತರಬೇತಿ ಆಯೋಜಿಸುತ್ತಿದೆ ಎಂದರು.
ಕಾರ್ಯಕ್ರಮವನ್ನು ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ತಮ್ಮ ಸ್ಟಾರ್ಟ್ ಅಪ್ ವ್ಯವಹಾರ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಮತ್ತು ಸಫಲ ಉದ್ಯಮಿಯಾಗಲು ಈ ಕಾರ್ಯಾಗಾರವು ಸಹಾಯ ಮಾಡುತ್ತದೆ . ಈ ಕಾರ್ಯಾಗಾರವು ಅಭಿಪ್ರಾಯಗಳು , ಆಲೋಚನೆಗಳು ಮತ್ತು ಇತ್ತೀಚಿನ ಆವಿಷ್ಕಾರಗಳನ್ನು ವಿನಿಮಯ ಮಾಡಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ ಮತ್ತು MSME, IE ಕೋಡ್, ಟ್ರೇಡ್ ಲೈಸೆನ್ಸ್, TIN ಮತ್ತು ಹೊಸ ಉದ್ಯಮವನ್ನು ಪ್ರಾರಂಭಿಸಲು ಅಗತ್ಯವಿರುವ ಇತರ ದಾಖಲಾತಿಗಳಿಗೆ ನೋಂದಣಿ ಮಾಡುವಂತಹ ಕಲಿಕೆಯನ್ನು ಕೂಡ ನೀಡುತ್ತದೆ ಎಂದರು.














