ಬಂಟ್ವಾಳ :ಡಿ.13.ರಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ - 2 ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ" ಜಲ್ ಜೀವನ್ ಮಿಷನ್ " ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮ ಪಂಚಾಯತ್ ನಲ್ಲಿ ನೀರು ಮತು ನೈರ್ಮಲ್ಯ ಸಮಿತಿ ಸದಸ್ಯರಿಗೆ ನೀರಿನ ಗುಣಮಟ್ಟ ಪರೀಕ್ಷಾ ತರಭೇತಿಯನ್ನು ಆಯೋಜಿಸಲಾಗಿತ್ತು.
ಈ ತರಭೇತಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುನಿಲ್ ನೆಲ್ಸನ್ ಪಿಂಟೋ, ಉಪಾಧ್ಯಕ್ಷೆ ವನಿತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಜೀವ ನಾಯ್ಕ್, ಪಂಚಾಯತ್ ನೀರು ನೈರ್ಮಲ್ಯ ಸಮಿತಿಯ ಸದಸ್ಯರು , ನೀರು
ಗಂಟಿಗಳುˌ ಪಂಚಾಯತ್ ಸಿಬ್ಬಂದಿಗಳು ಸೇರಿ ಒಟ್ಟು ೨೬ ಜನರು ಭಾಗವಹಿಸಿದ್ದರು.
ತರಬೇತಿಯನ್ನು ಗ್ರಾಮ್ಸ್ ರಾಯಚೂರು ಸಂಸ್ಥೆಯ ಜಲ ಜೀವನ್ ಮಿಷನ್ ಬಂಟ್ವಾಳ ತಾಲೂಕಿನ ಸಮುದಾಯ ಸಂಘಟಕರಾದ ವಿಲ್ಮಾ ಮತ್ತು ಚಂದ್ರಶೇಖರ್ ರವರು ಆಯೋಜಿಸಿ ಯಶಸ್ವಿಗೊಳಿಸಿದರು.














