Coastal Bulletin

ಬಂಟ್ವಾಳ: ಶೌಚಾಲಯದ ಗುಂಡಿ ಅಗೆಯುತ್ತಿರುವಾಗ ಮಣ್ಣು ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಅಡ್ಡೂರಿನಲ್ಲಿ ಮಂಗಳವಾರ ಸಂಜೆ ನಡೆದಿದೆ.

ಘಟನೆಯಿಂದ ಅಡ್ಡೂರು ನಿವಾಸಿ ಆದಂ ಮೃತಪಟ್ಟಿದ್ದು ಇಮ್ತಿಯಾಝ್ ಮತ್ತು ಇಬ್ರಾಹೀಂ ಎಂಬವರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಸ

ಮನೆ ನಿರ್ಮಾಣದ ಶೌಚಾಲಯಕ್ಕೆ ಗುಂಡಿ ಅಗೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಒಟ್ಟು ನಾಲ್ಕು ಮಂದಿ ಕೆಲಸ ಮಾಡುತ್ತಿದ್ದು ಓರ್ವ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

Leave a Comment