ಬಂಟ್ವಾಳ :ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಕೂಟ ಎನ್ ಡಿ ಎ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಹಾಗೂ ನಿತೀಶ್ ಕುಮಾರ್ ನೇತೃತ್ವದಲ್ಲಿ ಭರ್ಜರಿ ಗೆಲುವು ಸಾಧಿಸಿ ಇತಿಹಾಸ ನಿರ್ಮಾಣ ಮಾಡಿರುವುದಕ್ಕೆ ಬಂಟ್ವಾಳದ ಸಿದ್ದಕಟ್ಟೆ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಬಿಜೆಪಿ ಪಕ್ಷದ ಪರವಾಗಿ ಜೈಕಾರ ಘೋಷಣೆಯೊಂದಿಗೆ ಸಂಭ್ರಮಾಚರಸಿದರು.
ಬಿಜೆಪಿ ಪ್ರಮುಖರಾದ ಪ್ರಭಾಕರ ಪ್ರಭು, ಸತೀಶ್ ಪೂಜಾರಿ, ಸುರೇಶ್ ಕುಲಾಲ್, ಸಂದೇಶ ಶೆಟ್ಟಿ, ರಾಜೇಶ್ ಶೆಟ್ಟಿ, ಸುನೀಲ್ ಶೆಟ್ಟಿಗಾರ್,ದೀಪಕ್ ಶೆಟ್ಟಿಗಾರ್, ನವೀನ ಹೆಗ್ಡೆ, ಭೋಜ
ಶೆಟ್ಟಿಗಾರ್, ಉಮೇಶ್ ಗೌಡ,ಸಂತೋಷ ಕುಲಾಲ್, ಸೇಸಪ್ಪ ಸಪಲ್ಯ, ಸಂಜೀವ ಶೆಟ್ಟಿಗಾರ್, ಕೃಷ್ಣಪ್ಪ ಪೂಜಾರಿ,ಪುಷ್ಪರಾಜ್ ಶೆಟ್ಟಿ, ದಿವಾಕರ ಶೆಟ್ಟಿಗಾರ್,ಬೂಬಾ ಶೆಟ್ಟಿಗಾರ್ ಮತ್ತಿತರರ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.















