ಬಂಟ್ವಾಳ :ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ) ಮಂಜೇಶ್ವರ ಶಾಖೆಯ ವತಿಯಿಂದ ಆಟಿದ ಕೂಟ ಹಾಗೂ ವಾರ್ಷಿಕ ಮಹಾಸಭೆ ಯು ಇತ್ತೀಚೆಗೆ ಜಿಲ್ಲಾ ಕುಲಾಲ ಸಮುದಾಯ ಭವನ,ತೂಮಿನಾಡು ಕುಂಜತ್ತೂರು ನಲ್ಲಿ ಜರುಗಿತು.
ಹರೀಶ್ ಮೂಲ್ಯಣ್ಣ.ಬಂಗೇರ ತರವಾಡು ಆಡ್ಕ ಕುಂಜತ್ತೂರು ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಗೋಪಾಲ ಸಾಲ್ಯಾನ್ ಕಣ್ವತೀರ್ಥ, ಅಧ್ಯಕ್ಷರು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ಶಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರವೀಂದ್ರ ಮುನ್ನಿಪ್ಪಾಡಿ (ನ್ಯಾಯವಾದಿ) ಅಧ್ಯಕ್ಷರು ಕಾಸರಗೋಡು ಜಿಲ್ಲಾ ಕುಲಾಲ ಸಂಘ, ಕುಶಲಾಕ್ಷಿ ವಿ ಕುಲಾಲ್ ಕಣ್ವತೀರ್ಥ,ತುಲು ಸಾಹಿತಿ ಹಾಗೂ ಜೈ ತುಲುನಾಡ್ ರಿ ಕಾಸ್ರೋಡು ಶಾಖೆಯ ಅಧ್ಯಕ್ಷರು,ಶ್ರೀ ರಾಮ ಬಂಗೇರ, ನಿವೃತ್ತ ಮೆನೇಜರ್,ಕೇರಳ ಗ್ರಾಮೀಣ ಬ್ಯಾಂಕ್,ಶ್ರೀ ಉದಯ ಕುಮಾರ್ ಕಣ್ವತೀರ್ಥ.ಸಂಪರ್ಕ ಅಧಿಕಾರಿ ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ. ಶ್ರೀ ವಿಜಯ ಕುಮಾರ್. ಪ್ರಾಂಶುಪಾಲರು ಶ್ರಿ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆ ಕೊಡ್ಲಮೊಗರು,ಶ್ರೀ ಜಗದೀಶ್.ವಿ. ಕುಲಾಲ್ ಭಾಗವಹಿಸಿದ್ದರು,
ಹಿರಿಯ ಕೃಷಿಕರಾದ
ಶ್ರೀ ಗಂಗಯ್ಯ ಮೂಲ್ಯ ಬಡಾಜೆ,ಶ್ರೀ ವಾಮನ ಕುಲಾಲ್ ಕಣ್ವತೀರ್ಥ, ಸಾಹಿತಿ ಕುಶಲಾಕ್ಷಿ ಕಣ್ವತೀರ್ಥ ರವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರೀಮತಿ ಸುಪ್ರೀತಾ ಉದಯ್ ಕಣ್ವತೀರ್ಥ ಬಳಗದವರಿಂದ ನೃತ್ಯ ವೈವಿಧ್ಯವು ಕಾರ್ಯಕ್ರಮವನ್ನು ರಂಗೇರಿಸಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಕಾಸರಗೋಡು ಜಿಲ್ಲಾ ಕುಲಾಲ ಸಂಘ ದ ಕಟ್ಟಡ ಸಮಿತಿಯ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ದೀಕ್ಷಾ ಬಹುಮಾನ ವಿತರಿಸಿದರು.ಸಮಾಜ ಬಾಂಧವರು ಮನೆಯಲ್ಲೇ ತಯಾರಿಸಿ ತಂದ ವಿವಿಧ ಸಾಂಪ್ರದಾಯಿಕ ಅಡುಗೆ, ತಿನಿಸುಗಳನ್ನು ಎಲ್ಲರೂ ಜೊತೆಯಾಗಿ ಸವಿದರು.ತದನಂತರ ಶಾಖೆಯ ಮಹಾಸಭೆ ಸಂಪನ್ನಗೊಂಡಿತು.ನೂತನ ಪದಾಧಿಕಾರಿಗಳ ಆಯ್ಕೆಯಾಯಿತು. ಸಮಾಜದ ಮಕ್ಕಳ ಪ್ರಾರ್ಥನೆ ಯೊಂದಿಗೆಆರಂಭವಾದ ಕಾರ್ಯಕ್ರಮನನ್ನು ಶಾಖೆಯ ಕಾರ್ಯದರ್ಶಿ ಶ್ರೀ ಈಶ್ವರ ಕುಲಾಲ್ ಕಣ್ವತೀರ್ಥ ಸ್ವಾಗತಿಸಿ,ಶ್ರೀ ತಾರಾನಾಥ ಕುಲಾಲ್ ಕಣ್ವತೀರ್ಥ ವಂದಿಸಿದರು,ಶ್ರೀ ಆನಂದ್ ಸಾಲ್ಯಾನ್ ಕಣ್ವತೀರ್ಥ ನಿರೂಪಿಸಿದರು.














