ಪಡೀಲ್:ಸಮಾಜ ಸೇವಾ ಸಹಕಾರಿ ಸಂಘ ಬಂಟ್ವಾಳ,ಸ್ವಸಹಾಯ ಸಂಘಗಳ ಸದಸ್ಯರ ಸಮ್ಮಿಲನ ಕಾರ್ಯಕ್ರಮ.

Coastal Bulletin
ಪಡೀಲ್:ಸಮಾಜ ಸೇವಾ ಸಹಕಾರಿ ಸಂಘ ಬಂಟ್ವಾಳ,ಸ್ವಸಹಾಯ ಸಂಘಗಳ ಸದಸ್ಯರ ಸಮ್ಮಿಲನ ಕಾರ್ಯಕ್ರಮ.

ಮಂಗಳೂರು :ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಪಡೀಲ್ ಶಾಖೆಯ ಅಮೂಲ್ಯ ಸ್ವಸಹಾಯ ಸಂಘಗಳ ಸದಸ್ಯರ ಸಮ್ಮಿಲನ ಕಾರ್ಯಕ್ರಮವು ಜೂ 13ರಂದು ಮಂಗಳೂರಿನ ಬಜಾಲ್ ಬಳಿ ಇರುವ ಮಹಾದೇವಿ ಭಜನಾ ಮಂದಿರದ ಸಭಾ ಸಭಾಭವನದಲ್ಲಿ ಜರಗಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸುರೇಶ್ ಕುಲಾಲ್ ರವರು ವಹಿಸಿದ್ದರು. ಉಪಾಧ್ಯಕ್ಷ ರಾದ ಜನಾರ್ಧನ ಬೊಂಡಾಲ ಉಪಸ್ತಿತರಿದ್ದರು. ಸಂಘದ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀಯುತ ಮೋಹನ್ ಎಂ.ಕೆ. ಸಹಕಾರಿಯ ಬೆಳವಣಿಗೆಯಲ್ಲಿ ಸ್ವಸಹಾಯ ಸಂಘಗಳ ಪಾತ್ರದ ಬಗ್ಗೆ ಮಾಹಿತಿ ನೀಡಿದರು. 


ಸಭೆಯಲ್ಲಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷರಾದ

ಕಿರಣ್ ಅಟ್ಲೂರು, ನಿರ್ದೇಶಕರುಗಳಾದ ಅರುಣ್ ಕುಮಾರ್ ಕೆ, ಸತೀಶ್ ಪಲ್ಲಮಜಲು, ರಮೇಶ್ ಬಿ ಸಾಲ್ಯನ್, ಗಣೇಶ್ ಸಾಮಗಾರ ಹಾಜರಿದ್ದರು.

ಶಾಖ ವ್ಯವಸ್ಥಾಪಕ ವಿನೋದ್ ಕುಮಾರ್ ವಿಟ್ಲ ರವರು ಪ್ರಸ್ತಾಪಿಸಿ, ಸ್ವ ಸಹಾಯ ಸಂಘಗಳ ಮೇಲ್ವಿಚಾರಕರುಗಳಾದ ದುರ್ಗಾ ಪ್ರಸಾದ್ ಪಿ.ಕೆ. ಸ್ವಾಗತಿಸಿ,ಶಿವರಾಮ್ ಮರ್ತಾಜೆ ಕಾರ್ಯಕ್ರಮ ನಿರೂಪಿಸಿ, ಕಚೇರಿ ಸಹಾಯಕ ಶ್ರೀ ವೆಂಕಟೇಶ್ ಕೃಷ್ಣಾಪುರ ವಂದಿಸಿದರು.ಶಾಖ ಸಿಬ್ಬಂದಿಗಳು ಸಹಕರಿಸಿದರು.

Leave a Comment