ಬಂಟ್ವಾಳ :ಸೇವಾ ಭಾರತಿ ಬಂಟ್ವಾಳ ತಾಲೂಕು ಸೇವಾ ಜಾಗರಣ ತುಂಬೆ ಇವರ ಜಂಟಿ ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಹಾಗೂ ವೆನ್‌ಲಾಕ್ ಸರಕಾರಿ ಆಸ್ಪತ್ರೆ, ಮಂಗಳೂರು ಇವರ ಸಹಯೋಗದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಚಾಲಕರಾಗಿದ್ದ ಕೀರ್ತಿಶೇಷ ಕೊಡ್ಯಾಣ್ ಕಾಂತಪ್ಪ ಶೆಟ್ಟಿಯವರ ಸಂಸ್ಮರಣಾರ್ಥ 38ನೇ ರಕ್ತದಾನ ಶಿಬಿರವು ಜೂ. 16ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 9.00ರಿಂದ ಶ್ರೀ ಶಾರದಾ ಸಭಾ ಭವನ, ಶ್ರೀ ರಾಮ ನಗರ ತುಂಬೆ ಇಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕೆ. ಆರ್. ದೇವದಾಸ್ ಕೊಡ್ಯಾಣ್, ಮುಖ್ಯೋಪಾಧ್ಯಾಯರು, ಶ್ರೀ ರಾಮ ವಿದ್ಯಾ ಸಂಸ್ಥೆ, ಫರಂಗಿಪೇಟೆ, ಯುವರಾಜ್ ಎ.ಕೆ ಸಹ್ಯಾದ್ರಿ ಚಾರಿಟೇಬಲ್ ಟ್ರಸ್ಟ್, ಮಂಗಳೂರು
ಶೇಖರ ಪೂಜಾರಿ, ನಿವೃತ್ತ ಅಧಿಕಾರಿ, ನೀರು ಸರಬರಾಜು ಇಲಾಖೆ ಇವರು ಉಪಸ್ಥಿತರಿರುವರು.
ರಕ್ತದಾನ ಶಿಬಿರದ ಸೇವಾ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಭಾಗವಹಿಸಬೇಕಾಗಿ ಸಮಿತಿಯು ಪ್ರಕಟಣೆ ತಿಳಿಸಿದೆ.










