ಕೈತ್ರೋಡಿ: 'ಭ್ರಾಮರಿ' ರಂಗಮಂದಿರಕ್ಕೆ ವಿವಿಧ ಸಂಘ ಸಂಸ್ಥೆಗಳ ಕೊಡುಗೆ ಹಸ್ತಾಂತರ.

Coastal Bulletin
ಕೈತ್ರೋಡಿ: 'ಭ್ರಾಮರಿ' ರಂಗಮಂದಿರಕ್ಕೆ ವಿವಿಧ ಸಂಘ ಸಂಸ್ಥೆಗಳ ಕೊಡುಗೆ ಹಸ್ತಾಂತರ.

ಬಂಟ್ವಾಳ:ಇಲ್ಲಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟಸ್ರ್ ಎಂಬಲ್ಲಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸೇವಾ ಸಮಿತಿ ವತಿಯಿಂದ ರೂ 25 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ 'ಭ್ರಾಮರಿ' ಸಾರ್ವಜನಿಕ ರಂಗಮಂದಿರ ಮತ್ತು ಕಿರು ಸಭಾಂಗಣ ಕಾಮಗಾರಿಗೆ ವಿವಿಧ ಸಂಘ ಸಂಸ್ಥೆಗಳು ಕೊಡುಗೆ ನೀಡಿ ಗಮನ ಸೆಳೆದಿದೆ.

ರಾಯಿ ಶ್ರೀ ಮಹಾಲಿಂಗೇಶ್ವರ ಶಾಖೆ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಯೋಗ ಬಂಧುಗಳು ಒಟ್ಟು ಸೇರಿ ರೂ 5,850 ಮೊತ್ತದ ಕೊಡುಗೆ ನೀಡಿದ್ದಾರೆ. ಇನ್ನೊಂದೆಡೆ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳ ಸಮಿತಿ ರೂ 25

ಸಾವಿರ ಮೊತ್ತದ ಕೊಡುಗೆ ಮತ್ತು ರಾಯಿ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ವತಿಯಿಂದ ರೂ.5 ಸಾವಿರ ಮೊತ್ತದ ಕೊಡುಗೆ ನೀಡಿದ್ದಾರೆ. ಕಟೀಲು ಮೇಳದಿಂದ ಗುರುವಾರ ರಾತ್ರಿ ನಡೆದ 'ಕಲ್ಯಾಣತ್ರಯ' ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಈ ಕೊಡುಗೆ ಹಸ್ತಾಂತರಿಸಿದರು.

Leave a Comment