ಸುಜೀರು :ಜ.15ರಂದು ಶ್ರೀ ವೀರ ಹನುಮಾನ್ ಮಂದಿರ (ರಿ)ದತ್ತನಗರ ಇದರ 23ನೇ ವಾರ್ಷಿಕೋತ್ಸವ

Coastal Bulletin
ಸುಜೀರು :ಜ.15ರಂದು ಶ್ರೀ ವೀರ ಹನುಮಾನ್ ಮಂದಿರ (ರಿ)ದತ್ತನಗರ ಇದರ 23ನೇ ವಾರ್ಷಿಕೋತ್ಸವ

ಬಂಟ್ವಾಳ :ತಾಲೂಕಿನ ಪುದು ಗ್ರಾಮದ ಶ್ರೀ ವೀರ ಹನುಮಾನ್ ಮಂದಿರ (ರಿ)ದತ್ತನಗರ ಸುಜೀರು ಇದರ 23ನೇ ವಾರ್ಷಿಕೋತ್ಸವವು ಜ.15ರಂದು ಬುಧವಾರ ದತ್ತನಗರ ವೀರ ಹನುಮಾನ್ ಮಂದಿರದಲ್ಲಿ ನಡೆಯಲಿದೆ.

ಬೆಳಿಗ್ಗೆ ಗಣಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮದ್ಯಾಹ್ನ ಮಹಾಪೂಜೆಯ ಬಳಿಕ,ಧಾರ್ಮಿಕ ಸಭೆ,ಅನ್ನಸಂತರ್ಪಣೆ ನಡೆಯಲಿದೆ, ರಾತ್ರಿ

ಬಪ್ಪನಾಡು ಮೇಳದವರಿಂದ ಯಕ್ಷಗಾನ ಬಯಲಾಟ ಜರಗಲಿರುವುದು ಎಂದು ಮಂದಿರದ ಪ್ರ. ಕಾರ್ಯದರ್ಶಿ ಗಣೇಶ್ ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment