Coastal Bulletin

ಬಂಟ್ವಾಳ :ಜ.14 ರಿಂದ 26 ರ ವರೆಗೆ ಬ ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತ್ರತ್ವದಲ್ಲಿ ಗ್ರಾಮ ವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಿಂದ ಆರಂಭಗೊಂಡಿತ್ತು.

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿ ,ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರಿಗೆ ಪಕ್ಷದ ಧ್ವಜವನ್ನು ನೀಡಿ ದ‌ಕ.ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಚಾಲನೆ ನೀಡಿ ಮಾತನಾಡಿ, ನಾಯಕ ಪದಕ್ಕೆ ಅರ್ಥ ತುಂಬಿದವರು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ರಾಜ್ಯದಲ್ಲಿ ವಿವಾದರೈತ ಶಾಸಕರಲ್ಲಿ ಓರ್ವ ಎಂದು ಬಣ್ಣಿಸಿದರು.

ಅಭಿವೃದ್ಧಿ ಮತ್ತು ಪಕ್ಷ ಸಂಘಟನೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾರ್ಯ ಶ್ಲಾಘನೀಯ ಎಂದರು.

ಬಂಟ್ವಾಳ ಬಿಜೆಪಿ ಹಾಗೂ ಶಾಸಕ ರಾಜೇಶ್ ನಾಯ್ಕ್ ಅವರ  ಕಾಲಘಟ್ಟದಲ್ಲಿ ಧಾರ್ಮಿಕ ಕೇಂದ್ರಗಳ,  ಹಳ್ಳಿ ಹಳ್ಳಿಯ ಅಭಿವೃದ್ಧಿ ಕಂಡಿದೆ ಎಂದು ಅವರು ಹೇಳಿದರು.

ನೂರಾರು ಕೋಟಿ ರೂ.ಗಳ ಅಭಿವೃದ್ಧಿ ಜೊತೆ ಶಾಂತಿಯ ಬಂಟ್ವಾಳ ವನ್ನಾಗಿ ಮಾರ್ಪಾಡು ಮಾಡಿದ ಕೀರ್ತಿ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಸಲ್ಲುತ್ತದೆ.

ಸ್ಯಾಂಡ್ ಮಾಫಿಯಾ, ಲ್ಯಾಂಡ್ ಮಾಫಿಯಾ, ಗೂಂಡಾಗಿರಿಯ ರಾಜಕಾರಣ ನಿಂತುಹೋಗಿದೆ.  ಅಭಿವೃದ್ಧಿಯ ಪರ್ವ ಆರಂಭವಾಗಿದೆ.

ರಾಜ್ಯದಲ್ಲಿ ಮೂರು ಬಾರಿ ಪಾದಯಾತ್ರೆ ಮಾಡಿದ ಶಾಸಕರಿದ್ದರೆ ಅದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತ್ರ ಎಂದು ಅವರು ಹೇಳಿದರು.

ಹಲವಾರು ಜನಪರಯೋಜನೆಗಳ , ಧಾರ್ಮಿಕ ಕೇಂದ್ರಗಳ ಅಭಿವೃದ್ದಿ, ಗ್ರಾಮಗ್ರಾಮಗಳ ಅಭಿವೃದ್ದಿ ಮೂಲಕ ಭಾರತವನ್ನು ಜೋಡೋ ಮಾಡಿದ್ದು, ರಾಹುಲ್ ಗಾಂಧಿ ಅಲ್ಲ, ಈ ದೇಶದ ಪ್ರಧಾನಿ ನರೇಂದ್ರ ಮೋದಿ ಎಂದು ಅವರು ಹೇಳಿದರು.

ಅತೀ ಹೆಚ್ಚು ಕುಡಿಯುವ ನೀರಿನ ಯೋಜನೆ, ಮನೆಮನೆಗೆ ಗಂಗೆ, ಕಿಂಡಿ ಅಣೆಕಟ್ಟು ಗಳ ನಿರ್ಮಾಣ, ಧಾರ್ಮಿಕ ಕೇಂದ್ರ ಗಳ ಅಭಿವೃದ್ಧಿ ಹೀಗೆ ಕೋಟಿ ಕೋಟಿ ಅನುದಾನಗಳ ಮೂಲಕ ಅಭಿವೃದ್ಧಿ ಮಾಡಿದ ಯೋಜನೆ ಯನ್ನು ಜನರ ಮುಂದಿಡುವ ಕೆಲಸ ಕಾರ್ಯಕರ್ತರಿಂದ ಆಗಬೇಕಾಗಿದೆ. ಮತ್ತೋಮ್ಮೆ ಬಂಟ್ವಾಳ ದ ಅಭಿವೃದ್ಧಿಗಾಗಿ ಅತ್ಯಂತ ಹೆಚ್ಚಿನ ಅಂತರಿಂದ ಗೆಲುವು ಸಾಧಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕಾಗಿದೆ ಎಂದರು.

ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಜನರ ಸೇವೆ ಮಾಡಲು ಅವಕಾಶ ನೀಡಿದ್ದಕ್ಕೆ

ಯಾವುದೇ ಚ್ಯುತಿ ಬರದ ರೀತಿಯಲ್ಲಿ ಕೆಲಸ ಮಾಡಿದ್ದೇನೆ, ಮುಂದೆಯೂ ನಿಮ್ಮ ಸಹಕಾರ ಆಶ್ರೀರ್ವಾದ ಇರಲಿ ಎಂದು ಅವರು ಮನವಿ ಮಾಡಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಪೊಳಲಿ ರಾಮಕೃಷ್ಣ ತಪೋವನದ ವಿವೇಕಚೈತ್ಯಾನಂದ ಸ್ವಾಮೀಜಿ ಅವರನ್ನು ಬೇಟಿ ಮಾಡಿ ಅಶ್ರೀರ್ವಾದ ಪಡೆದು ಬಳಿಕ ಪೊಳಲಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ವೇದಿಕೆಯಲ್ಲಿ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ತುಂಗಪ್ಪ ಬಂಗೇರ, ಅರುಣ್ ರೋಶನ್ ಡಿ.ಸೋಜ, ರಾಮ್ ದಾಸ ಬಂಟ್ವಾಳ, ಮಾದವ ಮಾವೆ,ಸುದರ್ಶನ್ ಬಜ,  ಪೊಳಲಿ ದೇವಸ್ಥಾನದ ಪ್ರಧಾನ  ಅರ್ಚಕ ನಾರಾಯಣ ಭಟ್, ಅರ್ಚಕ ರಾಮ್ ಭಟ್, ರವೀಶ್ ಶೆಟ್ಟಿ ಕರ್ಕಳ, ಡೊಂಬಯ್ಯ ಅರಳ, ರವೀಂದ್ರ ಕಂಬಳಿ, ಜಗದೀಶ್ ಅಧಿಕಾರಿ,ವೆಂಕಟೇಶ ನಾವಡ, ಯಶವಂತ ಪೊಳಲಿ, ಚಂದ್ರಾವತಿ ಕರಿಯಂಗಳ, ಕಿಶೋರ್ ಪಲ್ಲಿಪಾಡಿ, ಲೋಕೇಶ್ ಭರಣಿ, ಸುಕೇಶ್ ಚೌಟ, ವಿವೇಕ್ ಶೆಟ್ಟಿ ನಗ್ರಿಗುತ್ತು, ಡಾ| ಪ್ರಶಾಂತ್ ಮಾರ್ಲ, ಸದಾನಂದ ಶೆಟ್ಟಿ ರಂಗೋಲಿ, ದಿನೇಶ್ ಅಮ್ಟೂರು, ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ, ಪುಷ್ಪರಾಜ್ ಚೌಟ, ಗಣೇಶ್ ರೈ ಮಾಣಿ, ಚರಣ್ ಜುಮಾದಿಗುಡ್ಡೆ, ಯಶೋಧರ ಕರ್ಬೆಟ್ಟು, ಹರ್ಷಿಣಿ ಪುಷ್ಪಾನಂದ, ವಿದ್ಯಾವತಿಪ್ರಮೋದ್ ಕುಮಾರ್, ಸವಿತಾ ಶೆಟ್ಟಿ, ಲಖಿತ್ ಆರ್ ಶೆಟ್ಟಿ, ರೇಖಾ ಪೈ, ರೊನಾಲ್ಡೊ ಡಿ.ಸೋಜ, ಪ್ರಕಾಶ್ ಅಂಚನ್, ಚಿದಾನಂದ ರೈ , ಮೋಹನ್ ಪಿ.ಎಸ್.ಪುರುಷೋತ್ತಮ ಪೂಜಾರಿ ನರಿಕೊಂಬು, ವಸಂತ ಅಣ್ಣಳಿಕೆ, ಹರೀಶ್ ಆಚಾರ್ಯ, ಸುರೇಶ್ ಕೋಟ್ಯಾನ್, ಪ್ರಭಾಕರ್ ಪ್ರಭು, ದೇವಿಪ್ರಸಾದ್ ಕೆಲಿಂಜ, ಗೋಪಾಲ ಸುವರ್ಣ, ಕೃಷ್ಣಪ್ಪ ಪೂಜಾರಿ, ಉದಯರಾವ್ ಬಂಟ್ವಾಳ, ಸೀಮಾ ಮಾದವ, ಸುಷ್ಮಾಚರಣ್, ಆಶಾ ಪಿ.ಶೆಟ್ಟಿ, ಮೊನಪ್ಪ ದೇವಶ್ಯ,ರಾಧಾಕೃಷ್ಣ ತಂತ್ರಿ,ನಳಿನ್ ಬಿ‌‌.ಶೆಟ್ಟಿ, ವಿದ್ಯಾದರ ರೈ, ನಂದರಾಮ ರೈ, ರತ್ನಕುಮಾರ್ ಚೌಟ,  ಮತ್ತಿತರರು ಉಪಸ್ಥಿತರಿದ್ದರು.

Leave a Comment