Coastal Bulletin

ವಿಟ್ಲ: ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸವಲತ್ತು ಸಿಗಬೇಕು ಎನ್ನುವ ನಿಟ್ಟಿನಲ್ಲಿ ಈ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಸಮಸ್ಯೆಯ ಪರಿಹಾರಕ್ಕಾಗಿ ಈ ಒಂದು ಕಾರ್ಯಕ್ರಮ ಅತ್ಯಂತ ಸಹಕಾರಿಯಾಗಿದೆ. ಇದು ನಮ್ಮ ಕೊನೆಯ ಕಾರ್ಯಕ್ರಮವಾಗಿದ್ದು, ಇಷ್ಟರ ವರೆಗೆ ಮಾಡಿದ ಐದು ಕಾರ್ಯಕ್ರಮಗಳು ಯಶಸ್ವಿಯಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಹೇಳಿದರು.

ಅವರು ಡಿ.13ರಂದು ಸಾಲೆತ್ತೂರಿನ ಸೌಹಾರ್ದ ಸಭಾಭವನದಲ್ಲಿ ಕೊಳ್ನಾಡು ಜಿ.ಪಂ‌.ವ್ಯಾಪ್ತಿಯ 6ನೇ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾನೂನು ಚೌಕಟ್ಟಿನಡಿಯಲ್ಲಿ ಸರಕಾರ ಮಟ್ಟದಲ್ಲಿ ಆಗುವ ಪ್ರತಿಯೊಂದು ಕೆಲಸಗಳನ್ನು ಸ್ಥಳದಲ್ಲಿಯೇ ಪರಿಹಾರಕ್ಕಾಗಿ ಕ್ರಮಕೈಗೊಳ್ಳುವುದು. ಗ್ರಾಮದ ಜನರು ಸಮಸ್ಯೆಗಳ ಕಡತಗಳನ್ನು ಹಿಡಿದುಕೊಂಡು ಕಚೇರಿ ಕಚೇರಿಗೆ ಅಲೆದಾಡಿ ಇತ್ಯರ್ಥವಾಗದ ಸಮಸ್ಯೆಗಳನ್ನು ಪರಿಹಾರ ಮಾಡುವ ಕೆಲಸ ಮಾಡುತ್ತೇನೆ. ಈ ವರೆಗೆ ಒಟ್ಟು2356 ಮಂದಿ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಗಿದೆ. ಜನರಿಗೆ ಸ್ಪಂದನೆ ಕೊಡುವ ಮಹತ್ವದ ಕಾರ್ಯಕ್ರಮ ಇದಾಗಿದ್ದು, ಕಾರ್ಯಕ್ರಮದ ಪ್ರಯೋಜನ ಪಡೆಯಲು ಅವರು ವಿನಂತಿ ಮಾಡಿದರು.

ತಹಶಿಲ್ದಾರ್ ಡಾ. ಸ್ಮಿತಾರಾಮುರವರು ಮಾತನಾಡಿ ಇದೊಂದು ಜನರಿಗೆ ಅತೀ ಪ್ರಯೋಜನ ವಾಗುವ ಕಾರ್ಯಕ್ರಮವಾಗಿದೆ. ಹೆಚ್ಚಿನ ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲು ಪ್ರಯತ್ನ ಮಾಡುತ್ತೇವೆ. ಉಳಿದವುಗಳನ್ನು ಸ್ಟೆಪ್ ವೈಸ್ ಪರಿಹರಿಸಲು ಪ್ರಯತ್ನಿಸಲಾಗುವುದು. ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗುತ್ತ ಸಾಗಿದೆ ಎಂದರು.

ಕೊಳ್ನಾಡು ಗ್ರಾಮಪಂಚಾಯತ್ ಅಧ್ಯಕ್ಷರಾದ ನೆಬಿಸಾ ಖಾದರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ

ಪಡ್ನೂರು ಗ್ರಾ.ಪಂ. ಅಧ್ಯಕ್ಷರಾದ ರೇಷ್ಮಾ ಶಂಕರಿ,  ಸಾಲೆತ್ತೂರು ಗ್ರಾ.ಪಂ ಹಸೈನಾರ್. ಅಧ್ಯಕ್ಷರಾದ, ಕನ್ಯಾನ ಗ್ರಾ.ಪಂ. ಅಧ್ಯಕ್ಷರಾದ ಕೆ.ಪಿ. ಅಬ್ದುಲ್ ರಹಿಮಾನ್, ಕರೋಪಾಡಿ ಗ್ರಾ.ಪಂ. ಅಧ್ಯಕ್ಷರಾದ ಅನ್ವರ್ ಕರೋಪಾಡಿ, ಮಂಚಿ ಗ್ರಾ.ಪಂ. ಅಧ್ಯಕ್ಷರಾದ ಪುಷ್ಪ ಕಾಮತ್, ಹಿಂದುಳಿದ ವರ್ಗಗಳ ಅಧಿಕಾರಿ ಬಿಂದಿಯಾ, ಕೆ.ಎಸ್.ಆರ್.ಟಿ.ಸಿ.ಡಿಪೋ ಮ್ಯಾನೇಜರ್ ಶ್ರೀಶ ಭಟ್, ತಾಲೂಕು ಆರೋಗ್ಯ ಅಧಿಕಾರಿ ಅಶೋಕ್ , ಜಿ.ಪಂ.ಇಂಜಿನಿಯರ್ ತಾರಾನಾಥ, ಪಿ.ಡಬ್ಲ್ಯೂ ಡಿ.ಇಲಾಖೆ ಇಂಜಿನಿಯರ್ ಜಯಪ್ರಕಾಶ್, ಅರಣ್ಯ ಇಲಾಖೆಯ ಅಧಿಕಾರಿ ರಾಜೇಶ್ ಬಳಿಗಾರ್, ಪಶುಸಂಗೋಪನೆ ಇಲಾಖೆ ಯ ವೈದ್ಯ ಅಧಿಕಾರಿ ಅವಿನಾಶ್, ವಿಟ್ಲ ಸಿ.ಡಿ.ಪಿ.ಒ. ಉಷಾ, ಕಾರ್ಮಿಕ ಇಲಾಖೆಯ ಅಧಿಕಾರಿ ಮರ್ಲಿನ್, ವಿಟ್ಲ ಠಾಣಾ ಎಸ್.ಐ. ರುಕ್ಮಯನಾಯ್ಕ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.

ಸಾಲೆತ್ತೂರಿನಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿಒಟ್ಟು 99 ಅರ್ಜಿ ಸ್ವೀಕಾರ ಮಾಡಲಾಯಿತು. ತಾ.ಪಂ.ಇ.ಒ.ರಾಜಣ್ಣ ಸ್ವಾಗತಿಸಿ, ವಂದಿಸಿದರು. ದಿನೇಶ್ ರಾಯಿ‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Comment