ಕಾಸರಗೋಡು:ಜೈ ತುಲುನಾಡ್(ರಿ)ಇದರ ಶಾಖೆಯ ವತಿಯಿಂದ ,ಸಂಘಟನೆಯ ಪ್ರಧಾನ ಸಂಚಾಲಕರಾದ ಪ್ರವೀಶ್ ಕುಲಾಲ್ ಹಾಗೂ ಕಾವ್ಯ ರವರ ಮದುವೆಯ ಔತಣಕೂಟದಲ್ಲಿ "ದಿಜೆದ ಇಡೆಟ್ ಸಾಹಿತ್ಯದ ತುಲಿಪು,ಮದಿಮೆಡಾವಡ್ ಪೊಸ ದೇಕಿದ ಮದಿಪು"ಎಂಬ ವಿಶಿಷ್ಟ ಕವಿಗೋಷ್ಠಿಯನ್ನು ಬೀರಿಕುಂಜದ ಮನೆಯಲ್ಲಿ ಆಯೋಜಿಸಲಾಯಿತು.
ತುಲುನಾಡಿನ ಹಿರಿ ಕಿರಿ ಕವಿಗಳಾದ ಪ್ರವೀಶ್ ಕುಲಾಲ್, ರಮೇಶ್ ಅಟ್ಟೆಗೋಳಿ,ನಿರ್ಮಲ ಸೇಸಪ್ಪ ಖಂಡಿಗೆ,ಸತೀಶ್ ಸಾಲಿಯನ್ ನೆಲ್ಲಿಕುಂಜೆ,ಆಶಾಲತ ಚೇವಾರ್,ಕುಶಲಾಕ್ಷಿ ಕಣ್ವತೀರ್ಥ,ಸೌಮ್ಯ ಆರ್. ಶೆಟ್ಟಿ ಮಂಜೇಶ್ವರ,ಶ್ರೀನಿವಾಸ ಆಳ್ವ ಕಳತ್ತೂರು,ಮತ್ತಿತರರು ಕವನವಾಚನ ಮಾಡಿದರು,
ಕು| ದಿಶಾ ಹಾಗೂ ಬಳಗದವರು ತುಲು ಭಾವ ಗೀತೆಯನ್ನು ಹಾಡಿದರು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ತುಲು ಕನ್ನಡ ಬರಹಗಾರರಾದ ಉಮೇಶ್ ಸಾಲಿಯನ್ ಶಿರಿಯಾ ವಹಿಸಿದ್ದು ,ಅಮೆತ್ತೊಡು ಗ್ರಾಮದ ಮೂಲ್ಯರ ಗುರಿಕಾರ ಈಶ್ವರ ಮೂಲ್ಯ ಹಾಗೂ ವಧು ವರರಾದ
ಪ್ರವೀಶ್,ಕಾವ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ,ಹರಿಕಾಂತ್ ಕಾಸರಗೋಡು, ಅದ್ಯಕ್ಷರು ಜೈ ತುಲುನಾಡ್ (ರಿ.) ಕಾಸ್ರೊಡು ಮತ್ತು ನಾರಾಯಣ ಪೂಜಾರಿ ಕೆ ಅಧ್ಯಾಪಕರು ಶ್ರೀ ಸ.ನಾ. ಫ್ರೌಡ ಶಾಲೆ, ಪೆರ್ಲ ವಹಿಸಿದ್ದರು,ಕು| ದಿಶಾ ಮತ್ತು ಕು| ಹಿತಾರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಕುಶಲಾಕ್ಷಿ ಕಣ್ವತೀರ್ಥ ಸ್ವಾಗತಿಸಿ, ಜಗನ್ನಾಥ ಕುಲಾಲ್ ಸಹಕರಿಸಿದರು.
ಕಾರ್ಯಕ್ರಮದ ಕೊನೆಗೆ ನಿರ್ಮಲಾ ಸೇಸಪ್ಪ ಖಂಡಿಗೆರವರು ವಂದನಾರ್ಪಣೆ ಗೈದರು,ಶ್ರೀನಿವಾಸ ಆಳ್ವ ಕಳತ್ತೂರು ಕಾರ್ಯಕ್ರಮ ನಿರೂಪಿಸಿದರು.














