Coastal Bulletin

ಬಂಟ್ವಾಳ:ಇಲ್ಲಿನ ಜೇಸಿಐ ಜೋಡುಮಾರ್ಗ ನೇತ್ರಾವತಿ ಇದರ ವತಿಯಿಂದ ಬಿ.ಸಿ.ರೋಡು ಸಮೀಪದ ಕೈಕುಂಜೆ ಕನ್ನಡ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ 'ಚಿಣ್ಣರ ಬೇಸಿಗೆ ಶಿಬಿರ' ಪುಟಾಣಿಗಳಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ.

ಸಂಪನ್ಮೂಲ ವ್ಯಕ್ತಿ ಜಯಂತಿ ಗಂಗಾಧರ್ ಇವರು ಮಕ್ಕಳಿಗೆ ಹಾಡು ಮತ್ತು ಕುಣಿತ ಜೊತೆಗೆ ಪೇಪರ್ ತುಂಡರಿಸಿ ಅಲಂಕಾರಿಕ ವಸ್ತು ರಚಿಸಲು ಮಾರ್ಗದರ್ಶನ ನೀಡಿದರು.

ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ್ ಕಾರ್ಯಕ್ರಮ ಉದ್ಘಾಟಿಸಿದರು. ಜೇಸಿಐ ಪೂರ್ವಾಧ್ಯಕ್ಷ

ಸುಂದರ ಮೊಯಿಲಿ ಶುಭ ಹಾರೈಸಿದರು.

ಜೇಸಿಐ ಜೋಡುಮಾರ್ಗ ನೇತ್ರಾವತಿ ಅಧ್ಯಕ್ಷ ಹರಿಪ್ರಸಾದ್ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷೆ ಶೈಲಜಾ ರಾಜೇಶ್, ಜೇಸಿ ರೇಖಾ ರಾವ್, ಉಪಾಧ್ಯಕ್ಷ ರವೀಂದ್ರ ಕುಕ್ಕಾಜೆ ಮತ್ತಿತರರು ಇದ್ದರು. 

Leave a Comment