ಬಂಟ್ವಾಳ: ತುಳುನಾಡಿನಲ್ಲಿ ಪಾವಿತ್ರ್ಯತೆ ಉಳಿಸಿಕೊಂಡಿರುವ ದೈವರಾಧನೆಗೆ ಚ್ಯುತಿ ಬಾರದಂತೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ದುಡಿಯುವ ದೈವನರ್ತಕ ದೇಜಪ್ಪ ಬಾಚಕೆರೆ ಈಚೆಗಷ್ಟೇ ಸ್ವತಃ ಶ್ರೀದೇವಿ ದೇವಸ್ಥಾನ ನಿರ್ಮಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಇಲ್ಲಿನ ಪಂಜಿಕಲ್ಲು ಗ್ರಾಮದ ಕಜೆಬೈಲು ಎಂಬಲ್ಲಿ ಸೋಮವಾರ ರಾತ್ರಿ ನಡೆದ ಪಿಲಿಚಾಮುಂಡಿ ದೈವದ ನೇಮೋತ್ಸವ ಕಾರ್ಯಕ್ರಮದಲ್ಲಿ ದೈವನರ್ತಕ ದೇಜಪ್ಪ ಬಾಚಕೆರೆ ಇವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಪ್ರಮುಖರಾದ ಪಂಜಿಕಲ್ಲುಗುತ್ತು ಕೃಷ್ಣರಾಜ್ ಜೈನ್, ಪೀದರ್ೊಟ್ಟುಗುತ್ತು ಪ್ರಕಾಶ್ ಕುಮಾರ್ ಜೈನ್, ಕೇಲ್ದೋಡಿಗುತ್ತು ಪದ್ಮನಾಭ ಕೋಟಿ ಪೂಜಾರಿ, ಕಜೆಬೈಲುಗುತ್ತು ಸಂಜೀವ ಶೆಟ್ಟಿ,
ಗಂಗಾಧರ ವಿ.ಪೂಜಾರಿ ಅಮೈಗುತ್ತು, ಸುದರ್ಶನ ಜೈನ್, ಬೇಬಿ ಕುಂದರ್, ದೇವಪ್ಪ ಕುಲಾಲ್ ಪಂಜಿಕಲ್ಲು, ಸದಾನಂದ ಶೆಟ್ಟಿ , ಕಾರಂಬಡೆ ಶ್ರೀ ಮಹಮ್ಮಾಯಿ ಕ್ಷೇತ್ರದ ಆಡಳಿತ ಮೋಕ್ತೇಸರ ಅರುಣ್ ಕುಮಾರ್,ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಹರೀಶ್ ಕೋಟ್ಯಾನ್, ಸುರೇಶ್ ಜೋರಾ, ದೀಪಕ್, ಪುನೀತ್, ರಾಜೇಶ್ ಗೌಡ ಮತ್ತಿತರರು ಇದ್ದರು.














