ಬಂಟ್ವಾಳ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಜಯಂತಿ ವಿ.ಪೂಜಾರಿ ಆಯ್ಕೆ.

Coastal Bulletin
ಬಂಟ್ವಾಳ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಜಯಂತಿ ವಿ.ಪೂಜಾರಿ ಆಯ್ಕೆ.

ಬಂಟ್ವಾಳ, ಮಾ. 12: ಪಾಣೆ ಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ.ಪೂಜಾರಿ ಅವರು ಬಂಟ್ವಾಳ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ತಾಲೂಕು ಮಟ್ಟದ ಅಧ್ಯಕ್ಷರು ಜಿಲ್ಲಾ ಮಟ್ಟದ ಸಮಿತಿಯ ಸದಸ್ಯರೂ ಆಗಿದ್ದು, ಉಳಿದಂತೆ ಬಂಟ್ವಾಳದಿಂದ ಜಿಲ್ಲಾ ಸಮಿತಿಗೆ ನಾರಾಯಣ

ನಾಯ್ಕ ಉಪಾಧ್ಯಕ್ಷರಾಗಿ, ಅಬ್ಬಾಸ್ ಆಲಿ ಹಾಗೂ ಸುದರ್ಶನ್ ಜೈನ್‌ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Leave a Comment