ಭಂಡಾರಿಬೆಟ್ಟು: ಮಾತೃ ವಂದನಾ ಮಾತೃ ಧ್ಯಾನ ಮಾತೃ ಭೋಜನ ಕಾರ್ಯಕ್ರಮ.

Coastal Bulletin
ಭಂಡಾರಿಬೆಟ್ಟು: ಮಾತೃ ವಂದನಾ ಮಾತೃ ಧ್ಯಾನ ಮಾತೃ ಭೋಜನ ಕಾರ್ಯಕ್ರಮ.

ಬಂಟ್ವಾಳ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ,(ರಿ ) ಕರ್ನಾಟಕ ನೇತ್ರಾವತಿ ವಲಯ ಮಂಗಳೂರು. ಯುವಜನ ವ್ಯಾಯಾಮ ಶಾಲೆ ಭಂಡಾರಿ ಬೆಟ್ಟು ಶಾಖೆ ಇದರ ಆಶ್ರಯ ದಲ್ಲಿ ಮಾತೃ ವಂದನಾ ಮಾತೃ ಧ್ಯಾನ ಮಾತೃ ಭೋಜನ ಕಾರ್ಯಕ್ರಮ ಜ. 11ರಂದು ನಡೆಯಿತು.

ಯೋಗ ಬಂಧುಗಳೊಂದಿಗೆ ಅವರ ಮನೆಯ ಸದಸ್ಯರು ಸೇರಿ 200ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಭಾರತೀಯ ಸಂಸ್ಕೃತಿಯಲ್ಲಿ ತಾಯಿಗಿರುವ ಪೂಜ್ಯನೀಯ ಸ್ಥಾನ, ತಾಯಿಯ ಮಹತ್ವ ತ್ಯಾಗ ಪ್ರೀತಿಯ ಬಗ್ಗೆ ಮುಖ್ಯ ಮಾತುಗಾರರಾಗಿ ಆಗಮಿಸಿರುವ ನೇತ್ರಾವತಿ ವಲಯ ಸಂಚಾಲಕರಾದ ಅಶೋಕ್ ಮಂಗಳೂರು ಇವರು ತಿಳಿಸುತ್ತಾ ಮಾತೃ ಧ್ಯಾನ ಕಾರ್ಯಕ್ರಮವನ್ನು ಭಾವಪೂರ್ಣವಾಗಿ ನೆರವೇರಿಸಿ ಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುಳಾ ಬಂಟ್ವಾಳ ಶಿಕ್ಷಕರು ರಕ್ತೇಶ್ವರಿ ಶಾಖೆ ಇವರು ವಹಿಸಿದರು.

ಮುಖ್ಯ ಅಭ್ಯಾಗತ ರಾಗಿ ಶರ್ಮಿಳ ಜಯ ಪೂಜಾರಿ, ಭಂಡಾರಿಬೆಟ್ಟು ಸಂಚಾಲಕರು ಸುವರ್ಣ ಮಹೋತ್ಸವ ಸಮಿತಿ,ಯುವಜನ ವ್ಯಾಯಾಮ ಶಾಲೆ ಭಂಡಾರಿಬೆಟ್ಟು ಇವರು ಭಾಗವಹಿಸಿದರು.

ಮುಖ್ಯ ಶಿಕ್ಷಕರಾದ ನಾರಾಯಣ ಪಾವಂಜೆ ಮಾರ್ಗದರ್ಶನ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ನಾರಾಯಣ ಅಜೆಕಲಾ, ಸುರೇಶ್ ರೈ, ನಾರಾಯಣ ಬಂಟ್ವಾಳ ಉಪಸ್ಥಿತರಿದ್ದರು ಹಾಗೂ ಯೋಗ ಬಂಧುಗಳು ಅನಿಸಿಕೆ ವ್ಯಕ್ತಪಡಿಸಿದರು. 

ಮನೋಹರಿ ಕಾರ್ಯಕ್ರಮ ನಿರ್ವಹಿಸಿದರು. ಸುಷ್ಮಾ ವರದಿ ವಾಚಿಸಿದರು. ಕುlತುಳಸಿ ಸ್ವಾಗತಿಸಿದರೆ ಶ್ರೀಮತಿ ವನಿತಾ ವಂದಿಸಿದರು.

Leave a Comment